ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ರಾಜಿನಾಮೆ
ಬಸವ ಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬುಧವಾರ ರಾಜಿನಾಮೆ ನೀಡಿದ್ದಾರೆ. ಖೂಬಾ ಅವರ...
ಬೆಂಗಳೂರು: ಬಸವ ಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬುಧವಾರ ರಾಜಿನಾಮೆ ನೀಡಿದ್ದಾರೆ. ಖೂಬಾ ಅವರ ರಾಜಿನಾಮೆಯಿಂದ ಜೆಡಿಎಸ್ಗೆ ಆಘಾತವುಂಟಾಗಿದೆ.
ಏತನ್ಮಧ್ಯೆ, ಖೂಬಾ ರಾಜಿನಾಮೆಯಿಂದಾಗಿ ಜೆಡಿಎಸ್ ಶಾಸಕರ ಸಂಖ್ಯೆ 40 ರಿಂದ 39ಕ್ಕೆ ಕುಸಿದಿದ್ದು, ಇದರಿಂದ ಪ್ರತಿಪಕ್ಷ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.
ನಾನು ಮುಖ್ಯ ಸಚೇತಕ ಸ್ಥಾನಕ್ಕಾಗಿ ಕುಮಾರಸ್ವಾಮಿ ಅವರ ಮುಂದೆ ಬೇಡಿಕೆ ಇಟ್ಟಿದ್ದೆ. ಆದರೆ ಕುಮಾರ ಸ್ವಾಮಿಯವರೇ ರಾಜಿನಾಮೆ ನೀಡಿರುವುದರಿಂದ ತನ್ನ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಆದ್ದರಿಂದ ತಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರಿಗೆ ಸಲ್ಲಿಸಿದ ರಾಜಿನಾಮೆ ಪತ್ರದಲ್ಲಿ ಖೂಬಾ ಹೇಳಿದ್ದಾರೆ.