ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಂಬೈ ಗ್ಯಾಂಗ್‌ರೇಪ್: ಓರ್ವ ಆರೋಪಿ ಬಾಲಾಪರಾಧಿ

ಕಳೆದ ವಾರ ಆಂಗ್ಲಪತ್ರಿಕೆಯ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣದ ಆರೋಪಿಗಳಲ್ಲಿ ಓರ್ವ ಆರೋಪಿ...

Rashmi Kasaragodu
Updated On : 28 Aug 2013, 5:06 am

ಮುಂಬೈ: ಕಳೆದ ವಾರ ಆಂಗ್ಲಪತ್ರಿಕೆಯ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣದ ಆರೋಪಿಗಳಲ್ಲಿ ಓರ್ವ ಆರೋಪಿ ಬಾಲಾಪರಾಧಿ ಎಂದು ತಿಳಿದು ಬಂದಿದೆ.

ಕಳೆದ ವಾರ ಮುಂಬೈಯ ಶಕ್ತಿ ಮಿಲ್ ಬಳಿ ಪತ್ರಿಕೆಯ ಛಾಯಾಗ್ರಾಹಕಿಯನ್ನು ಐವರು ಸಾಮೂಹಿಕ ಅತ್ಯಾಚಾರಗೈದಿದ್ದರು.

ಈ ಪ್ರಕರಣದ ಆರೋಪಿಗಳನ್ನು ಮುಂಬೈ ಪೊಲೀಸರು ಘಟನೆ ನಡೆದ 70 ಗಂಟೆಗಳೊಳಗೆ ಬಂಧಿಸಿದ್ದು, ಘಟನೆ ನಡೆದ 12 ಗಂಟೆಯೊಳಗೆ ಬಂಧಿಸಲ್ಪಟ್ಟ ಪ್ರಥಮ ಆರೋಪಿ ಈಗ ಬಾಲಾಪರಾಧಿ ಎಂದು ಸಾಬೀತಾಗಿದೆ.

ಈ ಹಿಂದೆ ಈ ಆರೋಪಿಗಳಲ್ಲಿ ಯಾರೂ ಅಪ್ರಾಪ್ತರಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದರು. ಆದರೆ ಈಗ ಆರೋಪಿಯ ಜನನ ಪ್ರಮಾಣ ಪತ್ರದ ಪ್ರಕಾರ ಪ್ರಥಮ ಆರೋಪಿ ಬಾಲಾಪರಾಧಿಯಾಗಿದ್ದಾನೆ ಎಂಬುದು ಸಾಬೀತಾಗಿದೆ.

ಆರೋಪಿಯನ್ನು ಬಂಧಿಸಿದಾಗ ಆತನ ಅಜ್ಜಿ ಜನನ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು ಅದರಲ್ಲಿ ಜನನ ದಿನಾಂಕವನ್ನು ತಿದ್ದಿ ಸರಿಪಡಿಸಿದಂತಿತ್ತು. ಆದರೆ ಇದೀಗ ಮುನಿಸಿಪಲ್ ಕಾರ್ಪೋರೇಷನ್‌ನಿಂದ ಪಡೆದ ಜನನ ಪ್ರಮಾಣ ಪತ್ರದಲ್ಲಿ ಈ ಆರೋಪಿ 1997ರಲ್ಲಿ ಜನಿಸಿದವನು ಎಂದಿದೆ. ಆರೋಪಿಗೆ 16 ವರ್ಷದವನಾಗಿರುವುದರಿಂದ ಒಂದು ವೇಳೆ ಆತ ತಪ್ಪಿತಸ್ಥ ಎಂದು ಸಾಬೀತಾದರೆ  ಗರಿಷ್ಠ 3 ವರ್ಷಗಳ ಕಾಲ ಆತ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement