ರು. 68.82ಕ್ಕೆ ತಲುಪಿದ ಡಾಲರ್ ಬೆಲೆ
ಕಳೆದ ಮೂರು ತಿಂಗಳಿನಿಂದ ಸತತವಾಗಿ ಡಾಲರ್ ಮುಂದೆ ಕುಸಿತ ಕಂಡಿರುವ ರುಪಾಯಿ ಮೌಲ್ಯ ಬುಧವಾರ...
ನವದೆಹಲಿ: ಕಳೆದ ಮೂರು ತಿಂಗಳಿನಿಂದ ಸತತವಾಗಿ ಡಾಲರ್ ಮುಂದೆ ಕುಸಿತ ಕಂಡಿರುವ ರುಪಾಯಿ ಮೌಲ್ಯ ಬುಧವಾರ ಪ್ರತಿ ಡಾಲರ್ಗೆ ರು.68.82ತಲುಪಿದೆ.
ದಿನದಿಂದ ದಿನಕ್ಕೆ ರುಪಾಯಿ ಮೌಲ್ಯ ಭಾರಿ ಕುಸಿತ ಕಂಡಿದ್ದು, ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀಳಲಿದೆ. ನಿನ್ನೆ ಪ್ರತಿ ಡಾಲರ್ಗೆ ರು. 66.24 ಗೆ ತಲುಪಿತ್ತು. ಆದರೆ ಇಂದು ಬೆಳಿಗ್ಗೆ ಡಾಲರ್ ಮುಂದೆ ಮತ್ತೆ ಕುಸಿದ ರುಪಾಯಿ ಮೌಲ್ಯ ಪ್ರತಿ ಡಾಲರ್ಗೆ ರು.68.82ಕ್ಕೆ ತಲುಪಿದೆ.
ಇದರಿಂದಾಗಿ ಈ ವರ್ಷದಲ್ಲಿ ರುಪಾಯಿ ಮೌಲ್ಯ ಶೇ.17ರಷ್ಟು ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶದಲ್ಲಿ ಡಾಲರ್ಗೆ ಹೆಚ್ಚಿದ ಬೇಡಿಕೆ ಹಾಗೂ ದುರ್ಬಲ ಸ್ಥಳೀಯ ಷೇರುಗಳಿಂದಾಗಿ ರುಪಾಯಿ ಮೇಲೆ ಒತ್ತಡ ಹೆಚ್ಚಿದೆ ಎಂದು ಮಧ್ಯವರ್ತಿಗಳು ತಿಳಿಸಿದ್ದಾರೆ.