ರುಪಾಯಿ ಮೌಲ್ಯ ಸ್ಥಿರವಾಗಬೇಕಾದರೆ ಯುಪಿಎ ಸರ್ಕಾರ ಕೆಳಗಿಳಿಯಬೇಕು: ಯಶ್ವಂತ್ ಸಿನ್ಹಾ
ದೇಶದ ಈಗಿನ ಆರ್ಥಿಕ ಸ್ಥಿತಿ ಹಾಗು ರುಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ...
ನವದೆಹಲಿ: ದೇಶದ ಈಗಿನ ಆರ್ಥಿಕ ಸ್ಥಿತಿ ಹಾಗು ರುಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ರುಪಾಯಿ ಮೌಲ್ಯ ಸ್ಥಿರವಾಗಬೇಕಾದರೆ ಯುಪಿಎ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದಾರೆ.
ಡಾಲರ್ ಎದುರು ಮುಗ್ಗರಿಸಿರುವ ರುಪಾಯಿ ಮೌಲ್ಯವನ್ನು ಯಥಾಸ್ಥಿತಿಗೆ ತರಬೇಕಾದರೆ ಕೇಂದ್ರ ಸರ್ಕಾರ ರಾಜಿನಾಮೆ ನೀಡಿ ಚುನಾವಣೆಯನ್ನೆದುರಿಸಬೇಕು. ಯುಪಿಎ ಸರ್ಕಾರ ಹೀಗೆಯೇ ಅಧಿಕಾರದಲ್ಲಿ ಮುಂದುವರಿದರೆ ಮುಂದಿನ ಎಂಟು ತಿಂಗಳುಗಳಲ್ಲಿ ಏನೇನು ನಡೆಯುವುದೋ? ಎಂಬುದನ್ನು ನಾನು ಯೋಚಿಸುತ್ತಿದ್ದೇನೆ.
ಯಾವುದೇ ಪೂರ್ವಗ್ರಹವಿಲ್ಲದೆ ನಾನು ಹೇಳುತ್ತೇನೆ...ಯುಪಿಎ ಸರ್ಕಾರ ಅಧಿಕಾರದಿಂದ ಕೆಳಗಿಳಿದು ಚುನಾವಣೆಯನ್ನು ಎದುರಿಸಲಿ. ಇಲ್ಲವಾದಲ್ಲಿ ದೇಶ ಇನ್ನಷ್ಟು ದುಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಆದಾಗ್ಯೂ, ದೇಶದ ಮಾರುಕಟ್ಟೆಯ ಸ್ಥಿತಿ ಹೇಗಿದೆ ಮತ್ತು ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲ ಎಂದು ಸಿನ್ಹಾ ಆರೋಪಿಸಿದ್ದಾರೆ.