ಲೋಕಸಭೆಯಲ್ಲಿ ಭೂಸ್ವಾಧೀನ ಮಸೂದೆ ಮಂಡನೆ ನಾಳೆ
ಲೋಕಸಭೆಯಲ್ಲಿ ಆಹಾರ ಭದ್ರತಾ ಮಸೂದೆ ಮಂಡನೆಯಾದ ನಂತರ ಗುರುವಾರ ಭೂಸ್ವಾಧೀನ ಮಸೂದೆ ಮಂಡನೆ ಮಾಡುವ...
ನವದೆಹಲಿ: ಲೋಕಸಭೆಯಲ್ಲಿ ಆಹಾರ ಭದ್ರತಾ ಮಸೂದೆ ಮಂಡನೆಯಾದ ನಂತರ ಗುರುವಾರ ಭೂಸ್ವಾಧೀನ ಮಸೂದೆ ಮಂಡನೆ ಮಾಡುವ ಮೂಲಕ ಯುಪಿಎ ಸರ್ಕಾರ ಮಹತ್ವದ ಹೆಜ್ಜೆಯನ್ನಿಡಲಿದೆ.
ವಿವಿಧ ಕೈಗಾರಿಕೋದ್ಯಮಗಳಿಗಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಯ ವಾರೀಸುದಾರರಿಗೆ ಪರಿಹಾರ ನೀಡುವುದು ಈ ಮಸೂದೆಯ ಉದ್ದೇಶವಾಗಿದೆ.
ಭೂಸ್ವಾಧೀನ ಮಸೂದೆಯ ಪ್ರಕಾರ ಕೈಗಾರಿಕೋದ್ಯಮಗಳಿಗಾಗಿ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಗ್ರಾಮೀಣ ಪ್ರದೇಶಗಳಲ್ಲಾದರೆ ಮಾರುಕಟ್ಟೆ ಬೆಲೆಯ 4 ಪಾಲು ಹಾಗು ನಗರ ಪ್ರದೇಶಗಳಲ್ಲಾದರೆ ಮಾರುಕಟ್ಟೆಯ 2 ಪಾಲು ಹೆಚ್ಚು ಬೆಲೆ ಪರಿಹಾರಧನವಾಗಿ ನೀಡಲಾಗುವುದು.
ಗ್ರಾಮೀಣಾಭಿವ್ಛದ್ಧಿ ಸಚಿವ ಜೈರಾಂ ರಮೇಶ್ ಪ್ರಸ್ತುತ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಈ ಮಸೂದೆ ಮಂಡನೆಯಿಂದಾಗಿ ಕೈಗಾರಿಕೋದ್ಯಮಕ್ಕಾಗಿ ಭೂಮಿ ಕಳೆದುಕೊಂಡವರಿಗೆ ಪರಿಹಾರಧನ ಸಿಗುವುದು ಮಾತ್ರವಲ್ಲದೆ ಇನ್ಮುಂದೆ ಭೂಸ್ವಾಧೀನ ಸಂಬಂಧಿತ ವ್ಯವಹಾರಗಳಲ್ಲಿ ಬದಲಾವಣೆ ಸಾಧ್ಯವಾಗುವುದು.