ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಡೋದರಾದಲ್ಲಿ ಕಟ್ಟಡ ಕುಸಿತ: 8 ಸಾವು

ಬುಧವಾರ ಬೆಳಗ್ಗಿನ ಜಾವ 4.30ಕ್ಕೆ ಗುಜರಾತ್‌ನ ವಡೋದರಾದಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, 8 ಜನರು...

Rashmi Kasaragodu
Updated On : 28 Aug 2013, 3:27 am

ವಡೋದರಾ: ಬುಧವಾರ ಬೆಳಗ್ಗಿನ ಜಾವ  4.30ಕ್ಕೆ ಗುಜರಾತ್‌ನ ವಡೋದರಾದಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, 8 ಜನರು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

ಕುಸಿದು ಬಿದ್ದ ಕಟ್ಟಡದ ಕೆಳಗೆ ಇನ್ನೂ 10 ಮಂದಿ ಸಿಕ್ಕಿ ಹಾಕಿಕೊಂಡಿರುವುದಾಗಿ ಅಲ್ಲಿನ ಪ್ರತ್ಯಕ್ಷದರ್ಶಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ವಡೋದರಾ ನಗರಾಭಿವೃದ್ಧಿಗೆ ಸೇರಿದ 13 ವರುಷ ಹಿಂದಿನ ಕಟ್ಟಡ ಇದಾಗಿದ್ದು, ಕಟ್ಟಡದ ಕಾಮಗಾರಿ ಕಳಪೆಯಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತದೆ. ಈ ಕಟ್ಟಡ ಕುಸಿದ ನಂತರ ಅದರ ಪಕ್ಕದಲ್ಲೇ ಇರುವ ಇನ್ನೊಂದು ಕಟ್ಟಡವೂ ಕುಸಿದು ಬಿದ್ದಿದೆ. ಆದರೆ ಆ ಕಟ್ಟಡದಲ್ಲಿ ಯಾವುದೇ ಜನವಾಸವಿರಲಿಲ್ಲ.

ಈ ಘಟನೆಯಲ್ಲಿ 8 ಜನರು ಸಾವಿಗೀಡಾಗಿದ್ದು, ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಅದೇ ವೇಳೆ 6 ಮಂದಿಗೆ ಗಾಯಗಳಾಗಿವೆ ಎಂದು ವಡೋದರಾ ಜಿಲ್ಲಾಧಿಕಾರಿ ವಿನೋದ್ ರಾವ್ ಹೇಳಿದ್ದಾರೆ.

ಪ್ರಸ್ತುತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅಲ್ಲಿನ ಪರಿಸ್ಥಿತಿಯ ಬಗ್ಗೆ ಅರಿಯಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಸಚಿವರೊಬ್ಬರನ್ನು ಅಲ್ಲಿಗೆ ಕಳುಹಿಸಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಘಟನೆಯಲ್ಲಿ ಸಾವಿಗೀಡಾದವರಿಗೆ ಗುಜರಾತ್ ವಿತ್ತ ಸಚಿವ ನಿತಿನ್ ಪಟೇಲ್ 200000 ರು. ಪರಿಹಾರ ಧನ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement