ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಾಧುಗಳು ಪಾವಿತ್ರ್ಯ ಕಾಪಾಡಬೇಕು: ಗೆಹ್ಲೋಟ್

ಅಸಾರಾಂ ಬಾಪು ವಿರುದ್ಧವಿರುವ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ರಾಜಸ್ತಾನ ಸರ್ಕಾರ ಮೃದುಧೋರಣೆ ತಳೆದಿದೆ ಎಂಬ ಆರೋಪ...

Rashmi Kasaragodu
Updated On : 28 Aug 2013, 4:29 am

ನವದೆಹಲಿ: ಅಸಾರಾಂ ಬಾಪು ವಿರುದ್ಧವಿರುವ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ರಾಜಸ್ತಾನ ಸರ್ಕಾರ ಮೃದುಧೋರಣೆ ತಳೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಜಸ್ತಾನದ ಜೋಧ್‌ಪುರದಲ್ಲಿರುವ ಆಶ್ರಮದಲ್ಲಿ ಅಸಾರಾಂ ಬಾಪು ಅವರು 16ರ ಹರೆಯದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಾಪುಗೆ ಸಮನ್ಸ್ ನೀಡಲಾಗಿತ್ತು.

ಏತನ್ಮಧ್ಯೆ, ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಬಂದಿರುವ ದೂರುಗಳನ್ನು ಕಳುಹಿಸಿಕೊಡಿ ಎಂದು ಕೇಂದ್ರ ಗೃಹ ಸಚಿವಾಲಯ ರಾಜಸ್ತಾನ, ದೆಹಲಿ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ಆದೇಶಿಸಿತ್ತು.

ಈ ಬಗ್ಗೆ ಮಾತನಾಡಿದ ರಾಜಸ್ತಾನ ಮುಖ್ಯಮಂತ್ರಿ, ಯಾರೊಬ್ಬರೂ ಕಾನೂನಿಗಿಂತ ಮೇಲಲ್ಲ ಎಂದು ಹೇಳಿದರೂ, ಅಸಾರಾಂ ಬಂಧನ ಸಾಧ್ಯತೆ ಇದೆಯೇ? ಎಂಬುದರ ಬಗ್ಗೆ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ.

ಸಾಧುಗಳು ಪಾವಿತ್ರ್ಯವನ್ನು ಕಾಪಾಡಿಕೊಂಡು ಬರಬೇಕು. ಹೀಗಿದ್ದರೆ ಮಾತ್ರ ಯಾರೊಬ್ಬರೂ ಅವರತ್ತ ಬೆರಳು ತೋರಿಸಿ ಆರೋಪ ಮಾಡುವುದಿಲ್ಲ. ಸಾಧುಗಳು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರದಂತೆ ಗೌರವವನ್ನು ಕಾಪಾಡಿಕೊಂಡು ಬರಬೇಕು ಎಂದು ಮಾಧ್ಯಮದವರಲ್ಲಿ ಮಾತನಾಡಿದ ಗೆಹ್ಲೋಟ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement