ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಶ್ರತ್ ಜಹಾನ್‌ಗೆ ಹೇಡ್ಲಿ ಜತೆ ನಂಟು?

ಆತ್ಮಾಹುತಿ ದಳದ ಯೋಜನೆಗೆ ಇಶ್ರತ್ ಜಹಾನ್ ಸೂಕ್ತ ಎಂದು ಉಗ್ರ ಡೇವಿಡ್ ಹೇಡ್ಲಿ ಅಮೆರಿಕದ ತನಿಖಾ ದಳದವರಲ್ಲಿ ಹೇಳಿದ್ದನು ಎಂದು...

Rashmi Kasaragodu
Updated On : 29 Aug 2013, 3:49 am

ನವದೆಹಲಿ: ಆತ್ಮಾಹುತಿ ದಳದ ಯೋಜನೆಗೆ ಇಶ್ರತ್ ಜಹಾನ್ ಸೂಕ್ತ ಎಂದು  ಉಗ್ರ ಡೇವಿಡ್ ಹೇಡ್ಲಿ ಅಮೆರಿಕದ ತನಿಖಾ ದಳದವರಲ್ಲಿ ಹೇಳಿದ್ದನು ಎಂದು ಉಲ್ಲೇಖಿಸಿರುವ ಪತ್ರವೊಂದನ್ನು ಗುಜರಾತ್ ಪೊಲೀಸರು ಹಾಜರು ಪಡಿಸಿದ್ದಾರೆ.

ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿತರಾಗಿರುವ ಗುಜರಾತ್ ಡಿಎಸ್ಪಿ ಎನ್. ಕೆ ಆಮಿನ್ ಅವರು ಈ ಪತ್ರವನ್ನು ಸುಪ್ರೀಂ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.

ಪ್ರಸ್ತುತ ಪತ್ರವನ್ನು ಅಮೆರಿಕ ರಾಯಭಾರಿಯ ಕಾನೂನು ಸಲಹೆಗಾರರು ಬರೆದಿದ್ದು, ಇದು ಹೇಡ್ಲಿ ಮತ್ತು ಇಶ್ರತ್‌ಗೆ ನಂಟು ಇತ್ತು ಎಂಬುದನ್ನು ಸಾಬೀತು ಪಡಿಸಲಿರುವ ಮೊದಲನೆ ಸಾಕ್ಷಿಯಾಗಿದೆ.

ಇಶ್ರತ್ ಜಹಾನ್ ಪ್ರಕರಣದಲ್ಲಿ ತನ್ನ ಮೇಲೆ ವ್ಯಥಾರೋಪ ಮಾಡಲಾಗುತ್ತಿದ್ದೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿ ಆಮೀನ್ ಈ ಪತ್ರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement