ಕಾಂಗ್ರೆಸ್ ಬಯಸಿದರೆ, ಚುನಾವಣೆಯಲ್ಲಿ ಸ್ಪರ್ಧಿಸುವೆ: ದಿಗ್ವಿಜಯ್ ಸಿಂಗ್
ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಹೇಳಿದ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ...
ಮಧ್ಯಪ್ರದೇಶ: ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಹೇಳಿದ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಅನುಮತಿ ನೀಡಿದರೆ ತಾನು ಲೋಕಸಭೆಯಲ್ಲಿ ಸ್ಪರ್ಧಿಸುವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ತಾನು ಮಧ್ಯಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ. ಆದರೆ ತನ್ನ ಪಕ್ಷ ಬಯಸಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ತಾನು ಆರೆಸ್ಸೆಸ್ಸ್‌ನ್ನು ಸದಾ ಟೀಕಿಸುತ್ತೇನೆ ಎಂದು ಜನರಾಡಿಕೊಳ್ಳುತ್ತಾರೆ, ಆದರೆ ನಾನು ಹೇಳಿದ್ದೆಲ್ಲಾ ನಿಜವಾಗಿದೆ.
ನಾನು ಆರೆಸ್ಸೆಸ್ಸ್ ಬಗ್ಗೆ ಹೇಳಿದಾಗಲೆಲ್ಲಾ ಜನ ನನ್ನನ್ನು ಟೀಕಿಸಿದ್ದಾರೆ, ಆದರೆ ನಾನು ಆರೆಸ್ಸೆಸ್ಸ್ ಮೇಲೆ ಮಾಡಿದ ಆರೋಪಗಳೆಲ್ಲವೂ ನಿಜವಾಗಿತ್ತು ಎಂದು ಸಿಂಗ್ ಹೇಳಿದ್ದಾರೆ.