ನಾನು 100ಕ್ಕೆ ನೂರು ಪ್ರಾಮಾಣಿಕ ಅಲ್ಲ: ಸಿಎಂ ಸಿದ್ದು
ನಾನು 100ಕ್ಕೆ ನೂರು ಪ್ರಾಮಾಣಿಕ ಅಲ್ಲ, ನಾವೂ ಸ್ವಲ್ಪ ರಾಜಿ ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ..
ಬೆಂಗಳೂರು: ನಾನು 100ಕ್ಕೆ ನೂರು ಪ್ರಾಮಾಣಿಕ ಅಲ್ಲ, ನಾವೂ ಸ್ವಲ್ಪ ರಾಜಿ ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಸಿಎಂ,
ಪ್ರಸ್ತುತ ರಾಜಕಾರಣ ಕೆಳಮಟ್ಟಕ್ಕೆ ಹೋಗುತ್ತಿದೆ. ರಾಜಕಾರಣದಲ್ಲಿ ಹಣ ಬಲ ಹಾಗೂ ತೋಳ್ಬಲ ಇರಬೇಕು. ಇದನ್ನು ನಾನೇ ಒಪ್ಪಿಕೊಳ್ಳುತ್ತೇನೆ. ಕೆಲವು ವಿಚಾರದಲ್ಲಿ ನಾವೂ ರಾಜಿ ಮಾಡಿಕೊಂಡಿದ್ದೇವೆ. ಹೀಗಾಗಿ ನಾನು 100ಕ್ಕೆ ನೂರು ಪ್ರಾಮಾಣಿಕ ಅಲ್ಲ. ಮತದಾರರು ಸಹ ಜಾತಿವಾದಿಗಳು ಹಾಗೂ ಭ್ರಷ್ಟರಾಗಬಾರದು ಎಂದರು.
ನಾನು ಮೊದಲು ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದೆ. ಆಗ ನನಗೆ ಹೆಗಡೆಯವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ನಂತರ ನನಗೆ ಸಚಿವ ಸ್ಥಾನ ನೀಡಿದ್ದರು ಎಂದು ಸಿಎಂ ತಿಳಿಸಿದರು.
ನಾನು ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಬೆಳದಿದ್ದೇನೆ. ನನಗೆ ಹೆಗಡೆ ವಿರುದ್ಧ ವೈಯಕ್ತಿಕ ವಿರೋಧ ಇರಲಿಲ್ಲ. ಆದರೂ ಕೆಲಕಾಲ ನಾನು ರಾಮಕೃಷ್ಣ ಹೆಗಡೆ ಅವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದೇ ಎಂದರು.