ಮೋದಿಗೆ ಬೆಂಬಲ ನೀಡಲು ಅಣ್ಣಾ ಹಜಾರೆ ಸಿದ್ಧ?
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ಸಿದ್ಧ ...
ವಾಷಿಂಗ್ಟನ್: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ಸಿದ್ಧ ಎಂದು ಹೇಳಿರುವುದಾಗಿ ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ಎರಡು ವಾರಗಳಿಂದ ಅಮೆರಿಕ ಪ್ರವಾಸದಲ್ಲಿದ್ದ ಅಣ್ಣಾ ನಿನ್ನೆ ಭಾರತಕ್ಕೆ ವಾಪಾಸಾಗಿದ್ದಾರೆ. ಅಮೆರಿಕದಲ್ಲಿ ಭಾರತೀಯ- ಅಮೆರಿಕನ್ ಸಮಾಜದಲ್ಲಿ ಮಾತನಾಡಿದ ಅಣ್ಣಾ ಮೋದಿಯವರು ಬಿಜೆಪಿ ತೊರೆದರೆ, ತಾನು ಮೋದಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆಂದು ಅಮೆರಿಕದ ಹಫಿನ್‌ಗ್ಟಂನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಅಣ್ಣಾ ಹಜಾರೆ ಮೋದಿಯವರನ್ನು ಬೆಂಬಲಿಸುವುದಿಲ್ಲ. ತನಗೆ ರಾಜಕೀಯ ಪಕ್ಷದಲ್ಲಿ ನಂಬಿಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಮೋದಿ ಬಿಜೆಪಿ ಪಕ್ಷದವರಾಗಿದ್ದರಿಂದ ಅಣ್ಣಾ ಮೋದಿಗೆ ಬೆಂಬಲ ಸೂಚಿಸಲ್ಲ.
ಆದರೆ ವೈಯಕ್ತಿಕವಾಗಿ ಮೋದಿಯವರಿಗೆ ಅಣ್ಣಾ ಬೆಂಬಲ ಸೂಚಿಸುತ್ತಾರೆ. ಅಂದರೆ ಮೋದಿ ಬಿಜೆಪಿ ತೊರೆದರೆ, ಮೋದಿಯವರಿಗೆ ನಾನು ಬೆಂಬಲ ನೀಡಲು ಸಿದ್ಧ ಎಂದು ಅಣ್ಣಾ ಹೇಳಿದ್ದಾರೆ ಎಂದು ದೆಲಾವೇರ್ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಮುಖ್ತೇದರ್ ಖಾನ್ ಅಣ್ಣಾ ಹೇಳಿಕೆ ಬಗ್ಗೆ ವಿವರಣೆ ನೀಡಿದ್ದಾರೆ.
ಆದಾಗ್ಯೂ, ಈ ಬಗ್ಗೆ ಅಣ್ಣಾ ಅವರ ಪ್ರತಿಕ್ರಿಯೆ ಮಾಧ್ಯಮದವರಿಗೆ ಲಭ್ಯವಾಗಿಲ್ಲ.