ಅಸಾರಾಂ ಬಾಪು ಹಾಜರಾಗದಿದ್ದರೆ ಬಂಧನ ಸಾಧ್ಯತೆ?
ಹದಿಹರೆಯದ ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಹೊತ್ತಿರುವ ಅಸಾರಾಂ ಬಾಪು ಶುಕ್ರವಾರ ಜೋಧಪುರ್...
ನವದೆಹಲಿ: ಹದಿಹರೆಯದ ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಹೊತ್ತಿರುವ ಅಸಾರಾಂ ಬಾಪು ಶುಕ್ರವಾರ ಜೋಧಪುರ್ ಪೊಲೀಸ್ ಮುಂದೆ ಹಾಜರಾಗುವುದಿಲ್ಲ ಎಂದು ಬಾಪು ಅವರ ಪುತ್ರ ನರೈನ್ ಸಾಯಿ ಹೇಳಿದ್ದಾರೆ.
ವಿಚಾರಣೆಗಾಗಿ ಹಾಜರಾಗಲು ಅಸಾರಾಂ ಬಾಪುಗೆ ಇನ್ನು ಹೆಚ್ಚಿನ ಕಾಲಾವಕಾಶ ನೀಡಲಾಗುವುದಿಲ್ಲ ಎಂದು ಡಿಸಿಪಿ ಅಜಯ್ ಲಾಂಬಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾಯಿ, ಇವತ್ತು ಅಸಾರಾಂ ಬಾಪು ಹಾಜರಾಗುವುದಿಲ್ಲ ಎಂದಿದ್ದಾರೆ.
ಒಂದು ವೇಳೆ ಅಸಾರಾಂ ಬಾಪು ಪೊಲೀಸರ ಮುಂದೆ ಹಾಜರಾಗದೇ ಇದ್ದಲ್ಲಿ, ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಮಂಗಳವಾರ ಬಾಪುಗೆ ಸಮನ್ಸ್ ಕಳುಹಿಸಿದ್ದು, ಅಗಸ್ಟ್ 30ರೊಳಗೆ ಪೊಲೀಸರ ಮುಂದೆ ಹಾಜರಾಗುವಂತೆ ಆದೇಶಿಸಲಾಗಿತ್ತು.