ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

"ಕಳ್ಳ" ಎಂದು ಹೇಳಿದ್ದಕ್ಕೆ ಪ್ರಧಾನಿ ಗರಂ

ತನ್ನನ್ನು ಕಳ್ಳ ಎಂದು ಕರೆದುದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ವಿಪಕ್ಷದ ವಿರುದ್ಧ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ...

Rashmi Kasaragodu
Updated On : 30 Aug 2013, 3:13 am

ನವದೆಹಲಿ: ತನ್ನನ್ನು ಕಳ್ಳ ಎಂದು ಕರೆದುದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ವಿಪಕ್ಷದ ವಿರುದ್ಧ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ.

ಯಾವುದೇ ದೇಶದಲ್ಲಾದರೂ ಸಂಸತ್ ಸದಸ್ಯರು ಪಿಎಂ ಚೋರ್ ಹೈ (ಪ್ರಧಾನಿ ಕಳ್ಳ) ಎಂದು ಬೊಬ್ಬೆ  ಹಾಕುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಮಾತನಾಡಿದ ಸಿಂಗ್ ಹೇಳಿದ್ದಾರೆ.

ರಾಜ್ಯಸಭೆಯ ವಿಪಕ್ಷ ನೇತಾರ ಬಿಜಪಿಯ ಅರುಣ್ ಜೇಟ್ಲಿ, ಪ್ರಧಾನಿ ಸಿಂಗ್ ಅವರ ಮೇಲೆ ಟೀಕಾಪ್ರಹಾರ ಮಾಡಿ, ಸರ್ಕಾರ ಯಾವುದಕ್ಕೂ ಸಹಕರಿಸುತ್ತಿಲ್ಲ ಎಂದು ಆರೋಪಿಸಿದುದಕ್ಕೆ ಪ್ರಧಾನಿ ಈ ರೀತಿ ಉತ್ತರಿಸಿದ್ದಾರೆ.

ದೇಶದ ಆರ್ಥಿಕತೆ ಮತ್ತು ರುಪಾಯಿ ಮೌಲ್ಯ ಕುಸಿತದ ಬಗ್ಗೆ ಪ್ರಧಾನಿ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ನಂತರ ಜೇಟ್ಲಿ ಪ್ರಧಾನಿ  ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಂಗ್ ವಿಪಕ್ಷಗಳು ಸರ್ಕಾರವನ್ನು ಸರಿಯಾಗಿ ಕಾರ್ಯವೆಸಗಲು ಬಿಡುತ್ತಿಲ್ಲ. ಉತ್ತಮ ಆಡಳಿತ ನಿರ್ವಹಿಸಬೇಕಾದರೆ ವಿಪಕ್ಷಗಳ ಸಹಕಾರ ಅತ್ಯಗತ್ಯ ಎಂದಿದ್ದಾರೆ.

ಅದೇ ವೇಳೆ ಕಲ್ಲಿದ್ದಲು ಪ್ರಕರಣದ ಕಡತಗಳು ನಾಪತ್ತೆಯಾಗಿರುವ ಬಗ್ಗೆ ಪ್ರಧಾನಿಯವರನ್ನು ಪ್ರಶ್ನಿಸಿದಾಗ, ಕಲ್ಲಿದ್ದಲು ಸಚಿವಾಲಯದ ಕಡತಗಳ ಜವಾಬ್ದಾರಿ ನನ್ನ ಮೇಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement