ಕಾಶ್ಮೀರದಲ್ಲಿ ಐವರು ಉಗ್ರರ ಹತ್ಯೆ
ಪೊಲೀಸರು ಉಗ್ರರ ಭೇಟೆ ಮುಂದುವರೆಸಿದ್ದು, ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯ ಐವರು ಉಗ್ರರನ್ನು ಶುಕ್ರವಾರ...
ಶ್ರೀನಗರ: ಪೊಲೀಸರು ಉಗ್ರರ ಬೇಟೆ ಮುಂದುವರೆಸಿದ್ದು, ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯ ಐವರು ಉಗ್ರರನ್ನು ಶುಕ್ರವಾರ ಎನ್ಕೌಂಟರ್ ಮಾಡಿದ್ದಾರೆ.
ಶ್ರೀನಗರದಿಂದ 35 ಕಿ.ಮಿ ದೂರದಲ್ಲಿರುವ ಜಮ್ಮ ಮತ್ತು ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಪ್ರಾಂಗ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಯ ಸಿಬ್ಬಂದಿ ನಡೆಸಿದ ಎನ್ಕೌಂಟರ್ಗೆ ಐವರು ಉಗ್ರರು ಬಲಿಯಾಗಿದ್ದಾರೆ.
ಹತ್ಯೆಯಾದ ಐವರು ಉಗ್ರರಲ್ಲಿ ಓರ್ವ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯ ಜಿಲ್ಲಾ ಕಮಾಂಡರ್ ಆಗಿದ್ದು, ಆತನನ್ನು ಅಸದುಲ್ಲಾ ಎಂದು ಗುರುತಿಸಲಾಗಿದೆ ಮತ್ತು ಐವರು ಉಗ್ರರು ವಿದೇಶಿಯರಾಗಿದ್ದು, ಅವರ ಗುರುತು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಕಂಗನ್ ಪೊಲೀಸರು ಹಾಗೂ ಸೇನಾಪಡೆ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.