ಜಿಸ್ಯಾಟ್-7 ಉಪಗ್ರಹ ಉಡಾವಣೆ ಯಶಸ್ವಿ
ಭಾರತದ ಮೊಟ್ಟ ಮೊದಲ ರಕ್ಷಣಾ ಉಪಗ್ರಹ ಜಿಸ್ಯಾಟ್-7 ಉಪಗ್ರಹ ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ...
ಬೆಂಗಳೂರು: ಭಾರತದ ಮೊಟ್ಟ ಮೊದಲ ರಕ್ಷಣಾ ಉಪಗ್ರಹ ಜಿಸ್ಯಾಟ್-7 ಉಪಗ್ರಹ ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ.
ರಕ್ಷಣಾ ಉದ್ದೇಶಕ್ಕಾಗಿ ದೇಶಿಯವಾಗಿ ನಿರ್ಮಿಸಲಾದ ಜಿಸ್ಯಾಟ್-7 ಉಪಗ್ರಹ ಫ್ರೆಂಚ್ ಗಯಾನಾದ ಕೌರು ಬಾಹ್ಯಾಕಶ ನೆಲೆಯಲ್ಲಿ ಯಶಸ್ವಿ ಉಡಾವಣೆಯಾಗಿದೆ. ಇದು ನೌಕಾ ಸಂವಹನಕ್ಕೆ ನೆರವಾಗುವ ಉಪಗ್ರಹವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 2 ಗಂಟೆಗೆ ಉಪಗ್ರಹವನ್ನು ಹೊತ್ತ 5 ರಾಕೆಟ್‌ಗಳು ಗಗನಕ್ಕೆ ಚಿಮ್ಮಿದೆ. ಭಾರತದ ಭೂಭಾಗ ಮತ್ತು ಸಾಗರಗಳ ಮೇಲೆ ಹಾಗೂ ದೇಶದ ಭದ್ರತೆ ಮತ್ತು ಸೂಕ್ಷ್ಮ ಭಾಗಗಳ ಮೇಲೆ ನಿಗಾ ಇಡುವುದಲ್ಲದೇ, ನೌಕಾ ಪಡೆಗೆ ಶರವೇಗದಲ್ಲಿ ಮಾಹಿತಿ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.