ಮುಂಬೈ ಗ್ಯಾಂಗ್‌ರೇಪ್ ಆರೋಪಿ ಮೇಲೆ ಮೊಟ್ಟೆ ಎಸೆತ
ಮುಂಬೈ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯ ಮೇಲೆ ಜನರು ಮೊಟ್ಟೆ ಎಸೆದ ಘಟನೆ ಶುಕ್ರವಾರ ವರದಿಯಾಗಿದೆ...
ಮುಂಬೈ: ಮುಂಬೈ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯ ಮೇಲೆ ಜನರು ಮೊಟ್ಟೆ ಎಸೆದ ಘಟನೆ ಶುಕ್ರವಾರ ವರದಿಯಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುತ್ತಿದ್ದ ವೇಳೆ ಆಗಂತುಕರು ಕೋರ್ಟ್ ಆವರಣದ ಹೊರಗೆ ಮೊಟ್ಟೆ ಎಸೆದಿದ್ದಾರೆ.
ಕಳೆದ ವಾರ ಆಂಗ್ಲ ಪತ್ರಿಕೆಯ ಛಾಯಾಗ್ರಾಹಕಿಯೊಬ್ಬರನ್ನು ಸಾಮೂಹಿಕ ಅತ್ಯಾಚಾರಗೈದ ಆರೋಪದಲ್ಲಿ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.