ಯಾಸಿನ್ ಭಟ್ಕಳ್ 12 ದಿನ ಎನ್ಐಎ ವಶಕ್ಕೆ
ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಹಾಗೂ ಆತನ ಆಪ್ತ ಅಸಾದುಲ್ಲಾ ..
ನವದೆಹಲಿ: ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಹಾಗೂ ಆತನ ಆಪ್ತ ಅಸಾದುಲ್ಲಾ ಅಖ್ತರ್ನನ್ನು ಕೋರ್ಟ್ 12 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ವಶಕ್ಕೆ ಒಪ್ಪಿಸಿದೆ.
ಬಿಹಾರ-ನೇಪಾಳ ಗಡಿಯಲ್ಲಿ ನಿನ್ನೆ ಬಂಧಿಸಲಾಗಿದ್ದ ಈ ಇಬ್ಬರು ಉಗ್ರರನ್ನು ಇಂದು ಎನ್ಐಎ ಅಧಿಕಾರಿಗಳು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ 12 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿದೆ.
ಬಿಹಾರಕ್ಕೆ ಹೊಂದಿಕೊಂಡಿರುವ ನೇಪಾಳ ಗಡಿಯಲ್ಲಿ ಬೇಹುಗಾರಿಕಾ ದಳ ಮತ್ತು ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಇಬ್ಬರು ಪಾತಕಿಗಳನ್ನು ಬುಧವಾರ ರಾತ್ರಿ ಬಂಧಿಸಲಾಗಿತ್ತು.
ಎನ್ಐಎ ಅಧಿಕಾರಿಗಳು ಇಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಉಗ್ರರನ್ನು ಪಾಟ್ನಾದಿಂದ ದೆಹಲಿಗೆ ಕರೆ ತಂದಿದ್ದರು.