ಯಾಸಿನ್ ಎನ್ಐಎ ವಶಕ್ಕೆ
ಇಂಡೋ-ನೇಪಾಳ ಗಡಿಭಾಗದಲ್ಲಿ ಬಂಧನಕ್ಕೊಳಗಾಗಿರುವ ಉಗ್ರ ಯಾಸಿನ್ ಭಟ್ಕಳ್ನ್ನು ದೇಶೀಯ ತನಿಖಾ ದಳ (ಎನ್ಐಎ) ಶುಕ್ರವಾರ...
ಪಾಟ್ನಾ: ಇಂಡೋ-ನೇಪಾಳ ಗಡಿಭಾಗದಲ್ಲಿ ಬಂಧನಕ್ಕೊಳಗಾಗಿರುವ ಉಗ್ರ ಯಾಸಿನ್ ಭಟ್ಕಳ್ನ್ನು ದೇಶೀಯ ತನಿಖಾ ದಳ (ಎನ್ಐಎ) ಶುಕ್ರವಾರ ದೆಹಲಿಗೆ ಕರೆತಂದಿದೆ.
ನಿನ್ನೆ ಬಂಧನಕ್ಕೊಳಗಾದ ಯಾಸಿನ್ ನಿನ್ನೆ ರಾತ್ರಿ ನಿದ್ದೆ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸಹ ಸಂಸ್ಥಾಪಕನಾದ ಯಾಸಿನ್ ಜತೆ ನಿನ್ನೆ ಇನ್ನೊಬ್ಬ ಉಗ್ರ ಅಸಾದುಲ್ಲ ಅಖ್ತರ್ನ್ನು ಬಂಧಿಸಲಾಗಿತ್ತು.
ಶುಕ್ರವಾರ ಬೆಳಗ್ಗೆ ಎನ್ಐಎ ಅಧಿಕಾರಿಗಳು ಯಾಸಿನ್ ಭಟ್ಕಳ್ ಮತ್ತು ಅಸಾದುಲ್ಲ ಅಖ್ತರ್ನ್ನು ವಿಚಾರಣೆಗೊಳಪಡಿಸಿದ್ದಾರೆ.
ಕಳೆದ 5 ವರ್ಷಗಳಿಂದ ಬಾಂಬ್ಸ್ಫೋಟ ಮತ್ತು ಇನ್ನಿತರ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಯಾಸಿನ್ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದನು.
ಬಂಧನಕ್ಕೊಳಗಾದ ಇವರಿಬ್ಬರೂ ರಾತ್ರಿ ಊಟ ಮಾಡಿ ಸಾಕಷ್ಟು ನೀರು ಕುಡಿದಿದ್ದಾರೆ. ಆದರೆ ಇವರು ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.