ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡೀಸಲ್ ಬೆಲೆ ಹೆಚ್ಚಳ ಸಾಧ್ಯತೆ

ರುಪಾಯಿ ಮೌಲ್ಯ ಕುಸಿತ ಹಾಗು ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಡೀಸೆಲ್ ಬೆಲೆ ಲೀಟರ್‌ಗೆ ರು.3ರಿಂದ 5 ಏರಿಕೆಯಾಗುವ...

Rashmi Kasaragodu
Updated On : 31 Aug 2013, 5:07 am

ನವದೆಹಲಿ: ರುಪಾಯಿ ಮೌಲ್ಯ ಕುಸಿತ ಹಾಗು ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಡೀಸೆಲ್ ಬೆಲೆ ಲೀಟರ್‌ಗೆ ರು.3ರಿಂದ 5 ಏರಿಕೆಯಾಗುವ ಸಾಧ್ಯತೆಯಿದೆ. ಅದೇ ವೇಳೆ ಸೀಮೆಎಣ್ಣೆ ರು. 2 ಹಾಗು ಎಲ್‌ಪಿಜಿ ಸಿಲಿಂಡರ್‌ಗೆ ರು. 50 ಏರಿಕೆಯಾಗುವ ಸಾಧ್ಯತೆಯಿದೆ.

ಗುರುವಾರ ವಿತ್ತಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿದ್ದ ತೈಲ ಸಚಿವ ಎಂ. ವೀರಪ್ಪ ಮೊಯ್ಲಿ ಅಗಸ್ಟ್ 30ನೇ ತಾರೀಖಿಗೆ ಪ್ರಧಾನಿ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಈಗಿನ ಪರಿಸ್ಥಿತಿ ಹೀಗೆ ಮುಂದುವರಿದರೆ ಒಟ್ಟು ಆದಾಯದಲ್ಲಿ ನಷ್ಟವುಂಟಾಗಲಿದೆ. 2012-13 ಆರ್ಥಿಕ ವರ್ಷದಲ್ಲಿ ರು. 161,000 ಕೋಟಿ ನಷ್ಟವುಂಟಾಗಿದ್ದು, ಈ ಬಾರಿ ರು. 180,000 ಕೋಟಿ ನಷ್ಟವುಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಡೀಸಲ್, ಎಲ್‌ಪಿಜಿ ಹಾಗು ಸೀಮೆ ಎಣ್ಣೆ ದರದಲ್ಲಿ ಏರಿಕೆಯನ್ನುಂಟು ಮಾಡಬೇಕು ಎಂದು ಮೊಯ್ಲಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರುಪಾಯಿ ಮೌಲ್ಯದಲ್ಲಿ ಶೇ. 25ರ ವರೆಗೆ ಕುಸಿತವುಂಟಾಗಿದ್ದು, ಇದು ಡೀಸೆಲ್ ಮಾರಾಟದ ಮೇಲೆ ಪ್ರಭಾವ ಬೀರಿದೆ ಎಂದು ಮೊಯ್ಲಿ ಹೇಳಿದ್ದಾರೆ.

ಸಪ್ಟೆಂಬರ್ 6ರಂದು ಸಂಸತ್‌ನಲ್ಲಿ ಮುಂಗಾರು ಅಧಿವೇಶನ ಅಂತ್ಯಗೊಳ್ಳಲಿದ್ದು, ಅದರ ನಂತರವೇ ಡೀಸೆಲ್ ಬೆಲೆ ಏರಿಕೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement