ಏಷ್ಯಾ ಕಪ್ ಹಾಕಿ ಫೈನಲ್ನಲ್ಲಿ ಭಾರತಕ್ಕೆ ಸೋಲು
ಮಲೇಶಿಯಾದ ಐಪೋದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಫೈನಲ್ನಲ್ಲಿ ಭಾರತ ಸೋಲು ಅನುಭವಿಸಿದೆ.
ಐಪೋ: ಮಲೇಶಿಯಾದ ಐಪೋದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಫೈನಲ್ನಲ್ಲಿ ಭಾರತ ಸೋಲು ಅನುಭವಿಸಿದೆ.
ಲೀಗ್ ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಜಯ ಸಾಧಿಸಿದ್ದ ಭಾರತ ತಂಡ ಇಂದು ನಡೆದ ಫೈನಲ್ ಪಂದ್ಯದಲ್ಲಿ ಅದೇ ಕೊರಿಯಾ ವಿರುದ್ಧ 4-3 ಗೋಲುಗಳ ಅಂತರದಿಂದ ಸೋತಿದೆ.
ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಪಾಕಿಸ್ತಾನ ಸೋಲುವುದರೊಂದಿಗೆ, ಭಾರತ ಮತ್ತು ಮಲೇಷ್ಯಾ ತಂಡಗಳು ಈಗಾಗಲೇ ವಿಶ್ವಕಪ್ ಪಂದ್ಯಾವಳಿಗೆ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದವು. ಭಾರತವನ್ನು ಮಣಿಸುವುದರೊಂದಿಗೆ ಏಷ್ಯಾ ಕಪ್ನ್ನು ಮುಡಿಗೇರಿಸಿಕೊಂಡಿರುವ ಕೊರಿಯಾ ಸಹ ಹಾಕಿ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.