ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೋನಿಯಾ ಗಾಂಧಿ ಆಮದು ಮಾಡಲ್ಪಟ್ಟ ನಾಯಕಿ:ಉದ್ಧವ್

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಆಮದು ಮಾಡಲ್ಪಟ್ಟ ನಾಯಕಿ, ಅವರನ್ನು ಇಟೆಲಿಗೆ ವಾಪಸ್ ಕಳುಹಿಸಬೇಕೆಂದು ಶಿವಸೇನಾ...

Rashmi Kasaragodu
Updated On : 1 Sept 2013, 12:59 pm

ಮುಂಬೈ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಆಮದು ಮಾಡಲ್ಪಟ್ಟ ನಾಯಕಿ, ಅವರನ್ನು ಇಟೆಲಿಗೆ ವಾಪಸ್ ಕಳುಹಿಸಬೇಕೆಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಶನಿವಾರ ನಾಗ್ಪುರದಿಂದ 40 ಕಿ.ಮೀ ದೂರದಲ್ಲಿರುವ ರಾಮ್‌ತೇಕ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಉದ್ಧವ್ ಈ ರೀತಿ ಹೇಳಿದ್ದಾರೆ. ಉದ್ಧವ್ ಅವರ ಈ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.

ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರುವ ರಾಮ್‌ತೇಕ್ ಕ್ಷೇತ್ರವನ್ನು  ಪ್ರಸ್ತುತ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ  ಸಚಿವ ಮುಕುಲ್ ವಾಸ್ನಿಕ್‌ಗೆ ಅವರು ಪ್ರತಿನಿಧಿಸುತ್ತಿದ್ದಾರೆ.

ಅದೇ ವೇಳೆ ಶುಕ್ರವಾರ ರಾಜ್ಯಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಟ್ಟಾಗಿರುವುದನ್ನು ಉಲ್ಲೇಖಿಸಿದ ಉದ್ಧವ್, ಭಾರತದ ಮೇಲೆ ಪಾಕ್ ಮತ್ತು ಚೀನಾ ಸೇನೆ ಆಕ್ರಮಣ ಮಾಡುವಾಗ ಸಿಂಗ್ ಯಾಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement