ಮಂಡೇಲಾ ವಿಧಿವಶ: ದೇಶದಲ್ಲಿ 5 ದಿನ ಶೋಕಾಚರಣೆ
ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ, ಶಾಂತಿದೂತ ನೆಲ್ಸನ್ ಮಂಡೇಲ್ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಐದು ದಿನ ಶೋಕಾಚರಣೆ ಘೋಷಿಸಿದೆ.
ನವದೆಹಲಿ: ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ, ಶಾಂತಿದೂತ ನೆಲ್ಸನ್ ಮಂಡೇಲ್ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಐದು ದಿನ ಶೋಕಾಚರಣೆ ಘೋಷಿಸಿದೆ.
ಇಂದು ನಡೆದ ವಿಶೇಷ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಶಾಂತಿದೂತನಿಗೆ ಗೌರವ ಸಲ್ಲಿಸಲು ಐದು ದಿನ ಶೋಕಾಚರಣೆ ಘೋಷಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನಿಶ್ ತೀವಾರಿ ಅವರು ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೀವಾರಿ, ನೆಲ್ಸನ್ ಮಂಡೇಲಾ ಅವರು ಸರ್ವಕಾಲಿಕ ಮಹಾನ್ ನಾಯಕ. ವರ್ಣಭೇದ ನೀತಿಯ ವಿರುದ್ಧದ ಅವರ ಹೋರಾಟ ಅವಿಸ್ಮರಣೀಯ ಎಂದು ಬಣ್ಣಿಸಿದರು.