ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್ ದೆಹಲಿ ಸಿಎಂ ಆಗಲಿ: ಜೆಡಿಯು ಆಗ್ರಹ

ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿರುವ ಜನತಾದಳ (ಸಂಯುಕ್ತ) ಪಕ್ಷ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೇರಲಿ ಎಂದು...

Rashmi Kasaragodu
Updated On : 9 Dec 2013, 3:26 am

ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿರುವ ಜನತಾದಳ (ಸಂಯುಕ್ತ) ಪಕ್ಷ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೇರಲಿ ಎಂದು ಆಗ್ರಹಿಸಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ವಿಜಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಯು ನೇತಾರ ಕೆ.ಸಿ ತ್ಯಾಗಿ, ತಾವು ಷರತ್ತುರಹಿತವಾಗಿರುವ ಬೆಂಬಲವನ್ನು ಎಎಪಿ ಪಕ್ಷಕ್ಕೆ ನೀಡಲಿದ್ದು, ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.

ಆದಾಗ್ಯೂ, ದೆಹಲಿಯ ಚುನಾವಣಾ ಫಲಿತಾಂಶ ಕಾಂಗ್ರೆಸ್ ವಿರುದ್ಧದ ಗೆಲುವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬಿಟ್ಟರೆ ಮೂರನೇ ಆಯ್ಕೆ ಯಾವುದು ಎಂಬುದಕ್ಕೆ ದೆಹಲಿ ಚುನಾವಣಾ ಫಲಿತಾಂಶ ಉದಾಹರಣೆಯಾಗಿದೆ ಎಂದು ನಿತೀಶ್ ಹೇಳಿದ್ದಾರೆ.

ಏತನ್ಮಧ್ಯೆ, ಜೆಡಿಯು ಬೆಂಬಲ ನೀಡಲು ಮುಂದಾಗಿರುವ ವಿಷಯದ ಬಗ್ಗೆ ಕೇಜ್ರಿವಾಲ್ ಅವರಲ್ಲಿ ಕೇಳಿದಾಗ, ತಾವು ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ. ಇದರ ಬದಲಾಗಿ ನಾವು ವಿಪಕ್ಷದಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement