ಬಿಜೆಪಿ-ಎಎಪಿ ಒಂದಾಗಬೇಕು: ಕಿರಣ್ ಬೇಡಿ
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವಂತೆ ನಿವೃತ್ತ ಐಪಿಎಸ್..
ನವದೆಹಲಿ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವಂತೆ ನಿವೃತ್ತ ಐಪಿಎಸ್ ಅಧಿಕಾರಿ, ಅಣ್ಣಾ ಹಜಾರೆ ತಂಡದ ಸದಸ್ಯೆ ಕಿರಣ್ ಬೇಡಿ ಅವರು ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಸೋಮವಾರ ಸಲಹೆ ನೀಡಿದ್ದಾರೆ.
ಸರ್ಕಾರ ರಚನೆ ಸಂಬಂಧ ಬಿಜೆಪಿ ಹಾಗೂ ಎಎಪಿ ಎರಡೂ ಪಕ್ಷಗಳು ಚರ್ಚೆ ನಡೆಸಲಿ ಎಂದಿದ್ದಾರೆ. ಅಲ್ಲದೆ ಈ ಸಂಬಂಧ ತಾವು ಮಧ್ಯಸ್ಥಿಕೆ ವಹಿಸುವುದಾಗಿಯೂ ಕಿರಣ್ ಬೇಡಿ ಹೇಳಿದ್ದಾರೆ.
ಎಎಪಿ ಹಾಗೂ ಬಿಜೆಪಿ ಇಬ್ಬರೂ ಜೊತೆಯಾಗಿ ಸರ್ಕಾರ ರಚಿಸಬೇಕು. ಈ ಎರಡೂ ಪಕ್ಷಗಳ ಮೇಲೆ ಜನರಿಗೆ ಹಲವು ನಿರೀಕ್ಷೆಗಳಿವೆ ಎಂದು ಕಿರಣ್ ಬೇಡಿ ಟ್ವಿಟ್ ಮಾಡಿದ್ದಾರೆ.