ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಎಪಿ ಶಾಸಕನ ವಿರುದ್ಧ ಕೇಸ್; ರಾಜಕೀಯ ಪಿತೂರಿ: ಸಿಸೋಡಿಯಾ

ತನ್ನ ನೂತನ ಶಾಸಕ ಧರ್ಮೇಂದ್ರ ಕೋಹ್ಲಿ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಹಾಗೂ ಗಲಭೆ ಪ್ರಕರಣದ..

Lingaraj Badiger
Updated On : 10 Dec 2013, 5:24 am

ನವದೆಹಲಿ: ತನ್ನ ನೂತನ ಶಾಸಕ ಧರ್ಮೇಂದ್ರ ಕೋಹ್ಲಿ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಹಾಗೂ ಗಲಭೆ ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಮಂಗಳವಾರ ಆಮ್ ಆದ್ಮಿ ಪಕ್ಷ(ಎಎಪಿ) ಆರೋಪಿಸಿದೆ.

ನಿನ್ನೆಯಷ್ಟೆ ದೆಹಲಿಯ ಸೀಮಾಪುರಿ ಕ್ಷೇತ್ರದ ಎಎಪಿ ಶಾಸಕ ಧರ್ಮೇಂದ್ರ ಕೋಹ್ಲಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಮುಖಂಡ ಮನಿಶ್ ಸಿಸೋಡಿಯಾ ಅವರು, ಇದೊಂದು ರಾಜಕೀಯ ಪಿತೂರಿ. ಸೋತ ಅಭ್ಯರ್ಥಿ ಗೆದ್ದ ಅಭ್ಯರ್ಥಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಅಷ್ಟೆ ಎಂದಿದ್ದಾರೆ.

ಧರ್ಮೇಂದ್ರ ಕೋಹ್ಲಿ ಅವರು ಸೀಮಾಪುರಿಯಲ್ಲಿ ಗೆಲುವು ಸಾಧಿಸಿದ ನಂತರ ವಿಜಯೋತ್ಸವ ರ್ಯಾಲಿ ನಡೆಸಿದ್ದರು. ಆ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾವಿರಾರು ಜನರನ್ನು ನಾವು ಪ್ರಶ್ನಿಸಿದ್ದು, ಅಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ವೀರ್ ಸಿಂಗ್ ಧಿಂಗಾನ್ ಅವರ ಪತ್ನಿ ಕೋಹ್ಲಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಕಳೆದ ಭಾನುವಾರ ವಿಜಯೋತ್ಸವದ ವೇಳೆ ಕೋಹ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೆಹಲಿ ವಿಧಾನಸಭೆ ನಡೆದ ಚುನಾವಣೆಯಲ್ಲಿ ವೀರ್ ಸಿಂಗ್ ಕೋಹ್ಲಿ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement