ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ್ ಮಸೂದೆ ಜಾರಿ: ನಾರಾಯಣಸ್ವಾಮಿ
ಜನ ಲೋಕಪಾಲ್ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜಾರಿಗೊಳಿಸಲಾಗವುದು ಎಂದು ಕೇಂದ್ರ ಸಚಿವ ನಾರಾಯಣ...
ನವದೆಹಲಿ: ಜನ ಲೋಕಪಾಲ್ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜಾರಿಗೊಳಿಸಲಾಗವುದು ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಮಂಗಳವಾರ ಹೇಳಿದ್ದಾರೆ.
ಪ್ರಬಲ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಭ್ರಷ್ಟಚಾರಿ ವಿರೋಧಿ ಅಣ್ಣಾ ಹಜಾರೆ ಅವರು ಇಂದು ತಮ್ಮ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡ ಬೆನ್ನಲ್ಲೆ ಸಚಿವ ನಾರಾಯಣ ಸ್ವಾಮಿ ಅವರು ಈ ಹೇಳಿಕೆ ನೀಡಿದ್ದಾರೆ.
ನಿನ್ನೆ ಭ್ರಷ್ಟಚಾರ ವಿರೋಧಿ ದಿನದಂದು ಅಣ್ಣಾ ಹಜಾರೆ ಅವರು ತಮ್ಮ ಗ್ರಾಮ ರಾಲೇಗಾಂವ್ ಸಿದ್ಧಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಲೋಕಪಾಲ್ ಮಸೂದೆ ಜಾರಿ ಮಾಡದಿದ್ದಲ್ಲಿ ಮತ್ತೆ ಉಪವಾಸ ಸತ್ಯಾಗ್ರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರದ ಮೇಲೆ ಪ್ರಬಲ ಲೋಕಪಾಲ್ ಮಸೂದೆ ಜಾರಿಗಾಗಿ ಎಷ್ಟೇ ಒತ್ತಡ ಹೇರಿದ್ದರು, ಸಾಧ್ಯವಾಗದ ಹಿನ್ನಲೆಯಲ್ಲಿ ಅಣ್ಣಾ ಹಜಾರೆ ಅವರು ಸ್ವಗ್ರಾಮದಲ್ಲಿ ಮತ್ತೇ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಇದರ ಬೆನ್ನಲ್ಲೇ, ಚಳಿಗಾಲದ ಅಧಿವೇಶನದಲ್ಲಿ ಜನ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಲಾಗವುದು ಎಂದು ನಾರಯಣಸ್ವಾಮಿ ಹೇಳಿದ್ದಾರೆ.