ಜಾವೇಡೆಕರ್ ಬಿಜೆಪಿಯ ಮುಖ್ಯಸಚೇತಕ: ಅಡ್ವಾಣಿ
ನವದೆಹಲಿ: ಭಾರತೀತಯ ಜನತಾ ಪಕ್ಷದ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಪ್ರಕಾಶ್ ಜಾವೇಡೆಕರ್ ಅವರು ಮೇಲ್ಮನೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಹೇಳಿದ್ದಾರೆ.
ಇಂದು ನಡೆದ ಪಕ್ಷದ ಸಭೆಯಲ್ಲಿ ಜಾವೇಡ್‌ಕರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು ಜಾವೇಡೆಕರ್ ಅವರು ಮುಖ್ಯಸಚೇತಕರು ಎಂದು ಘೋಷಿಸಿದ್ದಾರೆ.
ಬಿಜೆಪಿ ನಾಯಕಿ ಮಾಯಾ ಸಿಂಗ್ ಅವರು ಈ ಹಿಂದೆ ಮುಖ್ಯಸಚೇತಕರಾಗಿದ್ದರು. ಆದರೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ ಹಿನ್ನಲೆಯಲ್ಲಿ, ಜಾವೇಡೆಕರ್ ಅವರನ್ನು ಮುಖ್ಯಸಚೇತಕರನ್ನಾಗಿ ಮಾಡಲಾಗಿದೆ.