ನರೇಂದ್ರ ಮೋದಿ 'ಜೋಕರ್': ಕಾಂಗ್ರೆಸ್ ನಾಯಕ ಮಣಿಶಂಕರ್
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 'ಜೋಕರ್' ಎಂದು...
ನವದೆಹಲಿ: ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 'ಜೋಕರ್' ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಐಯ್ಯರ್ ಮಂಗಳವಾರ ಹೇಳಿದ್ದಾರೆ.
ಇತಿಹಾಸ ಮತ್ತು ಆರ್ಥಿಕ ವಿಷಯಧ ಬಗ್ಗೆ ಕಡಿಮೆ ಜ್ಞಾನ ಹೊಂದಿರುವ ಮೋದಿ ಜೋಕರ್ ಇದ್ದಂತೆ ಎಂದು ಐಯ್ಯರ್ ಟೀಕಿಸಿದ್ದಾರೆ.
ಹುಸಿ ಭರವಸೆಗಳನ್ನು ನೀಡುತ್ತಾ, ದೇಶದ ಆರ್ಥಿಕತೆ ಮತ್ತು ಇತಿಹಾಸದ ಬಗ್ಗೆ ಅರಿವಿಲ್ಲದ ಮೋದಿ, ಭಾಷಣಗಳನ್ನು ಮಾಡುತ್ತಾ ತಾವು ಜೋಕರ್ ಇದ್ದಂತೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಐಯ್ಯರ್ ವ್ಯಂಗ್ಯವಾಡಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಿರುವ ಬಿಜೆಪಿ ಹಾಗೂ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿದ್ದು, ಗೆಲುವಿಗೆ ಮೋದಿ ಕಾರಣರಲ್ಲ ಎಂದು ಹೇಳುತ್ತಿದ್ದಾರೆ.