ಸ್ವಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡ ಅಣ್ಣಾ
ರಾಲೇಗಾಂವ್ ಸಿದ್ಧಿ: ಭ್ರಷ್ಟಾಚಾರ ವಿರೋಧಿ ಅಣ್ಣಾ ಹಜಾರೆ ಅವರು ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಸ್ವಗ್ರಾಮದಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮಂಗಳವಾರದಿಂದ ಕೈಗೊಂಡಿದ್ದಾರೆ.
ಇಂದು ಅವರ ಸ್ವಗ್ರಾಮವಾದ ರಾಲೇಗಾಂವ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹೋರಾಟ ಆರಂಭಿಸಿದಾಗಿನಿಂದಲೂ, ಕಾಂಗ್ರೆಸ್ ಮಸೂದೆ ಜಾರಿಗೊಳಿಸುವುದಾಗಿ ಭರವಸೆ ನೀಡುತ್ತಾ ಬಂದಿದೆ ಹೊರತು, ಮಸೂದೆ ಜಾರಿ ಮಾಡಿಲ್ಲ. ಈ ಮೂಲಕ ಕಾಂಗ್ರೆಸ್ ಜನರನ್ನು ವಂಚಿಸಿದೆ ಎಂದು ಹಜಾರೆ ಆಪಾದಿಸಿದ್ದಾರೆ.
ಈಗ ಯುಪಿಎ ಸರ್ಕಾರಕ್ಕೆ ಸಮಯ ಬಂದಿದೆ. ಒಂದು ಲೋಕಪಾಲ್ ಮಸೂದೆ ಜಾರಿಗೊಳಿಸಬೇಕು, ಇಲ್ಲವಾದರೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಅಣ್ಣಾ ಒತ್ತಾಯಿಸಿದ್ದಾರೆ.