ಸಲಿಂಗಕಾಮ ಅಪರಾಧ: ಸುಪ್ರೀಂ ಕೋರ್ಟ್ ತೀರ್ಪು
ಸಲಿಂಗಕಾಮ ಅಪರಾಧ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ...
ನವದೆಹಲಿ: ಸಲಿಂಗಕಾಮ ಅಪರಾಧ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.
ಸಲಿಂಗ ಕಾಮ ಅಪರಾಧವಲ್ಲ ಎಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ನ್ಯಾಯಾಮೂರ್ತಿಗಳಾದ ಜಿ.ಎಸ್. ಸಿಂಗ್ವಿ ಮತ್ತು ನ್ಯಾ. ಎಸ್.ಜೆ. ಮುಖ್ಯೋಪಾಧ್ಯಾಯ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಸಲಿಂಗ ಕಾಮ ಜೀವಾವಧಿ ಶಿಕ್ಷೆ ವಿಧಿಸುವಂತಹ ಅಪರಾಧ ಎಂದು ಪೀಠ ಹೇಳಿದೆ. ಕಲಂ 377ರ ಪ್ರಕಾರ ಸಲಿಂಗಕಾಮ ಅಜೀವ ಕಾರಾಗೃಹ ವಾಸದ ಶಿಕ್ಷೆಗೆ ಅರ್ಹವಾಗಿರುವ ಅಪರಾಧ, ಆದ್ದರಿಂದ ಸಲಿಂಗಕಾಮಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಸಲಿಂಗ ಕಾಮದಲ್ಲಿ ತೊಡಗುವುದು ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 377ರ ಪ್ರಕಾರ ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿ ಸಲಿಂಗ ಕಾಮದಲ್ಲಿ ತೊಡಗಿದರೆ ಅದು ಅವರ ವೈಯಕ್ತಿಕ ಆಸಕ್ತಿ ಎಂದು ತೀರ್ಪಿನ ಬಗ್ಗೆ ವಿಶ್ಲೇಷಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಸಂಘನೆಗಳು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು.
ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಳೆದ ವರ್ಷ ಮಾರ್ಚ್ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ದೇಶದಲ್ಲಿ ಅಂದಾಜ 25 ಲಕ್ಷ ಸಲಿಂಗಕಾಮಿಗಳಿದ್ದಾರೆ ಹಾಗೂ ಈ ಪೈಕಿ ಶೇ. 7 ಮಂದಿ 1.75 ಲಕ್ಷ ಮಂದಿ ಏಡ್ಸ್ ರೋಗಿಗಳಾಗಿದ್ದಾರೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.