ಜೈಪುರದ ರಾಣಿಯನ್ನು ವರಿಸಿದ ಶ್ರೀಶಾಂತ್
ನವದೆಹಲಿ: ವಿವಾದಕ್ಕೆ ಸಿಲುಕಿರುವ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಅವರು ಜೈಪುರದ ರಾಣಿಯನ್ನು ಗುರುವಾರ ವರಿಸಿದ್ದಾರೆ.
ಕೇರಳದ ಶ್ರೀಕೃಷ್ಣಾ ದೇವಸ್ಥಾನದಲ್ಲಿ ಗೆಳತಿ ಭುವನೇಶ್ವರಿ ಕುಮಾರಿ ಅವರನ್ನು ವಿವಾಹವಾಗಿದ್ದಾರೆ. ಜೈಪುರುದ ರಾಜಮನೆತನದ ಭುವನೇಶ್ವರಿ ಅವರು ವೃತ್ತಿಯಲ್ಲಿ ಆಭರಣದ ವಿನ್ಯಾಸಕಿ. ಕಳೆದ ಹಲವಾರು ವರ್ಷಗಳಿಂದ ಪ್ರಿತಿಸುತ್ತಿದ್ದ ಈ ಜೋಡಿ, ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಶಾಂತ್ ಅವರನ್ನು ಮೇ 16 ರಂದು ಬಂಧಿಸಿ ಜೂನ್ 12ರಂದು ಬಿಡುಗಡೆಗೊಳಿಸಲಾಯಿತು. ಶ್ರೀಶಾಂತ್ ವಿರುದ್ಧ ಮೋಖಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.