ಪ್ರಧಾನಿಯಾಗುವ ಆಸೆ ಸೋನಿಯಾಗಿಲ್ಲ: ಆಸ್ಕರ್ ಫರ್ನಾಂಡಿಸ್
ನವದೆಹಲಿ: ಪ್ರಧಾನಿ ಹುದ್ದೆಗೆ ಸೋನಿಯಾ ಗಾಂಧಿಯವರು ಆಸೆಪಟ್ಟೆವರಲ್ಲ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಗುರುವಾರ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ ಹಾಗೂ ಅವರು ರಾಜಕೀಯ ಪ್ರವೇಶ ಮಾಡಲು ಇಚ್ಚಿಸಲಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದ್ದರಿಂದ ರಾಜಕೀಯ ಪ್ರವೇಶ ಮಾಡಿದರು ಎಂದು ಫರ್ನಾಂಡಿಸ್ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಆಗಬೇಕು ಎಂಬ ಆಸೆಯಿದಿದ್ದರೇ, ಇಷ್ಟು ವರ್ಷ ಕಾಯಬೇಕಿರಲಿಲ್ಲ. ರಾಜೀವ್ ಗಾಂಧಿ ಅವರ ನಿಧನದ ನಂತರ ಸೋನಿಯಾ ಪ್ರಧಾನಿಯಾಗುವ ಅವಕಾಶವಿತ್ತು. ಪ್ರಧಾನಿ ಹುದ್ದೆ ಅಲಂಕರಿಸುವಂತೆ ಪಕ್ಷದ ನಾಯಕರು ಬಹಳ ಒತ್ತಾಯಿಸಿದ್ದರು, ಆದರೆ ಸೋನಿಯಾ ಗಾಂಧಿ ಅವರು ನಿರಾಕರಿಸಿದರು ಎಂದು ಫರ್ನಾಂಡಿಸ್ ಹೇಳಿದ್ದಾರೆ.