ಲೋಕಪಾಲ್ ಮಸೂದೆ: ರಾಜ್ಯಸಭೆಯಲ್ಲಿ ನಾಳೆ ಚರ್ಚೆ ಸಾಧ್ಯತೆ
ನವದೆಹಲಿ: ಕೇಂದ್ರ ಸರ್ಕಾರ ನಾಳೆ ಜನ ಲೋಕಪಾಲ್ ಮಸೂದೆ ಕುರಿತು ರಾಜ್ಯಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಾಸಭಾಧ್ಯಕ್ಷರಿಗೆ ಲೋಕಪಾಲ್ ಮಸೂದೆ ಮಂಡನೆ ಬಗ್ಗೆ ಚರ್ಚಿಸಿ ಎಂದು ಆಯ್ಕೆ ಸಮಿತಿ ನೋಟೀಸ್ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ವಿ.ನಾರಾಯಣ ಸ್ವಾಮಿ ಅವರನ್ನೋಳಗೊಂಡ ಆಯ್ಕೆ ಸಮಿತಿ, ಲೋಕಪಾಲ್ ಮಸೂದೆಯನ್ನು ಕೂಡಲೇ ಮಂಡಿಸಬೇಕು ಎಂದು ರಾಜ್ಯಸಭಾಧ್ಯಕ್ಷರಿಗೆ ನೋಟೀಸ್ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಲೋಕಪಾಲ್ ಮಸೂದೆ ಮಂಡನೆಗೆ 13 ತಿದ್ದುಪಡಿಗಳನ್ನು ಶಿಫಾರಸ್ತು ಮಾಡಿದ್ದು, ಅದನ್ನು ಮಸೂದೆ ಮಂಡನೆ ವೇಳೆ ಪರಿಗಣಿಸಲಾಗುವುದು ಎಂದು ಶಿಂಧೆ ಹೇಳಿದ್ದಾರೆ.