ಲೋಕಪಾಲ್ ಮಸೂದೆಗೆ ಮೊದಲ ಆದ್ಯತೆ: ಕಮಲ್ ನಾಥ್
ಜನ ಲೋಕಪಾಲ್ ಮಸೂದೆ ನಮ್ಮ ಮೊದಲ ಆದ್ಯತೆ ಎಂದು ಕೇಂದ್ರ ಸಚಿವ ಕಮಲ್ನಾಥ್ ಗುರುವಾರ ಹೇಳಿದ್ದಾರೆ...
ನವದೆಹಲಿ: ಜನ ಲೋಕಪಾಲ್ ಮಸೂದೆ ನಮ್ಮ ಮೊದಲ ಆದ್ಯತೆ ಎಂದು ಕೇಂದ್ರ ಸಚಿವ ಕಮಲ್ನಾಥ್ ಗುರುವಾರ ಹೇಳಿದ್ದಾರೆ.
ಸಂಸತ್ ಚಳಿಗಾಲ ಅಧಿವೇಶವನ್ನು ಮೊಟಕುಗೊಳಿಸುವ ಉದ್ದೇಶವನ್ನು ಹೊಂದಿಲ್ಲ್ಲ. ಲೋಕಪಾಲ್ ಮಸೂದೆ ಜಾರಿಗೊಳಿಸುವುದರ ಜೊತೆಗೆ ಅನೇಕ ಮುಖ್ಯವಾದ ವ್ಯಾಪಾರ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಕಮಲ್ ನಾಥ್ ತಿಳಿಸಿದ್ದಾರೆ.
ಸಂಸತ್ ಚಳಿಗಾಲದ ಅಧಿವೇಶನವನ್ನು ಮುಂದೂಡಲಾಗುತ್ತಿದ್ದು, ಯಾವುದೇ ಕಾಯ್ದೆ ಜಾರಿಗೊಳಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕಮಲ್ನಾಥ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ದುರುದ್ದೇಶದಿಂದ ಅಧಿವೇಶವನ್ನು ಮುಂದೂಡಲಾಗುತ್ತಿಲ್ಲ. ಮಸೂದೆಗಳನ್ನು ಜಾರಿ ಮಾಡುವುದೇ ಕೇಂದ್ರ ಸರ್ಕಾರದ ನಿಲುವಾಗಿದೆ. ಆದರೆ ಯಾವ ವಿಚಾರವನ್ನು ಮೊದಲು ಪ್ರಸ್ತಾಪಿಸಬೇಕು ಎಂಬುದರ ಬಗ್ಗೆ ಪಟ್ಟಿ ಸಿದ್ಧಮಾಡಿದ್ದು, ಅದರ ಪ್ರಕಾರ ನಡೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಲೋಕಪಾಲ್ ಮಸೂದೆಗೆ ಆದ್ಯತೆ ನೀಡಲಾಗುವುದು. ಆದರೆ ಮೊದಲಿಗೆ ಇದನ್ನು ರಾಜ್ಯಸಭೆಯಲ್ಲಿ ಮಂಡಿಸಿ, ನಂತರ ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.