ದೆಹಲಿ ಪೊಲೀಸರಿಂದ ಶಂಕಿತ ಉಗ್ರನ ಬಂಧನ
ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದ ಶಂಕಿತ ಉಗ್ರ ಮೊಹಮ್ಮದ್ ಶಾಹಿದ್ ಎಂಬುವವನನ್ನು ಶುಕ್ರವಾರ ದೆಹಲಿ ಪೊಲೀಸರು...
ನವದೆಹಲಿ: ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದ ಶಂಕಿತ ಉಗ್ರ ಮೊಹಮ್ಮದ್ ಶಾಹಿದ್ ಎಂಬುವವನನ್ನು ಶುಕ್ರವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮೋಹಮ್ಮದ್ ಶಾಹಿದ್ನನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಶಂಕಿತ ಉಗ್ರನನ್ನು ಹಿಂಬಾಲಿಸಿ ಚಲನವಲನಗಳ ಬಗ್ಗೆ ಕಣ್ಣಿಡಲಾಗಿತ್ತು. ಆತನು ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ಖಚಿತವಾದ ಹಿನ್ನಲೆಯಲ್ಲಿ ಇಂದು ಆತನನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
ಹರಿಯಾಣದ ಮೇವಾತ್ ಎಂಬಲ್ಲಿ ಶಾಹೀದ್ನನ್ನು ದೆಹಲಿ ಪೊಲೀಸರು ಬಂಧಿಸಿದರು. ಶಾಹೀದ್ ದೆಹಲಿಯ ಜನಸಂದಣಿ ಎಚ್ಚಿರುವ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದನು ಎಂದು ಮೂಲಗಳು ತಿಳಿಸಿವೆ.
ಶಾಹೀದ್ ಬಳಿ ಇದ್ದ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿ ದೆಹಲಿಯ ಮೇಲೆ ದಾಳಿ ನಡೆಸುವುದರ ಪೂರ್ಣ ಯೋಜನೆಯನ್ನು ಬರೆಯಲಾಗಿದೆ ಎಂದು ತಿಳಿದು ಬಂದಿದೆ.