ಸರ್ಕಾರ ರಚನೆಗೆ ಬಹುಮತವಿಲ್ಲ: ಆಮ್ ಆದ್ಮಿ ಪಕ್ಷ
ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚನೆಗೆ ಬಹುಮತವಿಲ್ಲ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ನಾಯಕ ಯೋಗೇಂದ್ರ ಯಾದವ್ ಶುಕ್ರವಾರ ಹೇಳಿದ್ದಾರೆ.
ಉಪ ರಾಜ್ಯಪಾಲ ನಜೀಬ್ ಜಂಗ್ ಅವರನ್ನು ನಾಳೆ ಭೇಟಿ ಮಾಡಿದ ಬಳಿಕವೇ ಪಕ್ಷ ತನ್ನ ನಿಲುವನ್ನು ತಿಳಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ರಚನೆ ಕುರಿತಂತೆ ಚರ್ಚಿಸಲು ಉಪರಾಜ್ಯಪಾಲರಿಂದ ಆಹ್ವಾನ ಬಂದಿರುವುದನ್ನು ನಾವು ಸ್ವಾಗತಿಸುತ್ತೇವೆ. ಬೆಳಿಗ್ಗೆ ಸುಮಾರು 10.30ಕ್ಕೆ ಅವರನ್ನು ಭೇಟಿ ಮಾಡಿದ ನಂತರ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ.
ನಾಳೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಆಯ್ಕೆಯಾದ ಶಾಸಕರನ್ನು ತೃಪ್ತಿ ಪಡಿಸುವ ಸಲುವಾಗಿ ಕುದುರೆ ವ್ಯಾಪಾರ ಮಾಡಲು ಎಎಪಿ ಪಕ್ಷ ಸಿದ್ಧವಿಲ್ಲದಿರುವುದರ ಬಗ್ಗೆ ಹಾಗೂ ಪಕ್ಷಕ್ಕೆ ಬಹುಮತವಿಲ್ಲದಿರುವುದರ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪತ್ರವನ್ನು ಉಪರಾಜ್ಯಪಾಲರಿಗೆ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.