ಬಹುಮಹಡಿ ಕಟ್ಟಡಕ್ಕೆ ಬೆಂಕಿ; 7 ಸಾವು
ದಕ್ಷಿಣ ಮುಂಬೈನಲ್ಲಿ ವಸತಿ ಸಮುಚ್ಛಯವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಮುಂಬೈ ...
ಮುಂಬೈ: ದಕ್ಷಿಣ ಮುಂಬೈನಲ್ಲಿ ವಸತಿ ಸಮುಚ್ಛಯವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಇಲ್ಲಿನ ಕೆಂಪ್ಸ್ ಕಾರ್ನರ್‌ನಲ್ಲಿರುವ 36 ಮಹಡಿಗಳಿರುವ ವಸತಿ ಸಮುಚ್ಛಯದ 12ನೇ ಮಹಡಿಯಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿ ದ್ದು, 7 ಜನ ಈ ಅನಾಹುತದಲ್ಲಿ ಬಲಿಯಾಗಿದ್ದಾರೆ.
ಸಿನಿಮಾ ನಿರ್ಮಾಪಕ ದಿನೇಶ್ ಗಾಂಧಿ ಕೂಡಾ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಅಗ್ನಿ ಅನಾಹುತದಲ್ಲಿ ಸಾವಿಗೀಡಾದವರನ್ನು ಸುನಿತ್ರಾ ತೇಜ್‌ವಾಲ್, ಚಿತ್ತರಂಜನ್, ಚೋಟು ಮತ್ತು ಬಾರುವಾಲಾ ಮುಬಾಲಿಯಾ ಎಂದು ಪತ್ತೆ ಹಚ್ಚಲಾಗಿದೆ. ಇನ್ನೆರಡು ಮೃತದೇಹಗಳನ್ನು ಈಗಾಗಲೇ ಹೊರತೆಗೆದಿದ್ದು, ಈವರೆಗೆ ಗುರುತು ಪತ್ತೆಯಾಗಿಲ್ಲ.
ಇದೀಗ ಹೊರತೆಗೆದಿರುವ ಮೃತದೇಹಗಳು ಗಂಡಸರದ್ದಾಗಿದ್ದು, ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿರುವ ಕಾರಣ ಗುರುತು ಪತ್ತೆ ಹಚ್ಚಲು ಅಸಾಧ್ಯವಾಗಿದೆ ಎಂದು ಅಗ್ನಿಶಾಮಕ ದಳದವರು ಹೇಳಿದ್ದಾರೆ.
ನಿನ್ನೆ ಸಂಜೆ 7.30ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.