ವೈವಾಹಿಕ ಜೀವನದ ವಿದಾಯಕ್ಕೆ ಹೃತಿಕ್ ನಿರ್ಧಾರ
ಇತ್ತೀಚೆಗಷ್ಟೇ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಅವರು...
ನವದೆಹಲಿ: ಇತ್ತೀಚೆಗಷ್ಟೇ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಅವರು ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಹೃತಿಕ್ ರೋಷನ್ ಹಾಗೂ ಪತ್ನಿ ಸುಸ್ಸಾನ ಅವರು ತಮ್ಮ 13 ವರ್ಷಗಳ ವೈವಾಹಿಕ ಜೀವನಕ್ಕೆ ವಿದಾಯ ಹೇಳಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ದಂಪತಿಗಳಿಗೆ ಹ್ರೇಹಾನ್ ಮತ್ತು ಹ್ರೀದಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಸ್ವತಃ ಹೃತಿಕ್ ಅವರೇ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಸುಸ್ಸಾನ್ ಅವರು ತಮ್ಮೊಡನೆ 17 ವರ್ಷಗಳ ಸಂಬಂಧವನ್ನು ತೊರೆಯಲು ನಿರ್ಧರಿಸಿದ್ದಾರೆ. ಇದರಿಂದ ತಮ್ಮ ಕುಟುಂಬ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದೆ. ಆದ್ದರಿಂದ ದಯವಿಟ್ಟು ಮಾದ್ಯಮಗಳು ಹಾಗೂ ಜನರು ತಮ್ಮ ಖಾಸಗೀತನಕ್ಕೆ ಅಡ್ಡಿಯುಂಟು ಮಾಡಬಾರದು ಎಂದು ಹೃತಿಕ್ ಮನವಿ ಮಾಡಿದ್ದಾರೆ.
ಮದುವೆ ವ್ಯವಸ್ಥೆಗೆ ತುಂಬಾ ಗೌರವಿಸುತ್ತೇನೆ. ಖಾಸಗೀತನದ ಜೀವನ ತಮ್ಮ ಅಭಿಮಾನಿಗಳಲ್ಲಿ ಯಾವುದೇ ರೀತಿಯ ಪರಿಣಾಮ ಬೀರಬಾರದು. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲಾ ಅಭಿಮಾನಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ ಅವರು ಹೇಳಿದ್ದಾರೆ.
ನಟ ಸಂಜಯ್ ಖಾನ್ ಪುತ್ರಿಯಾದ ಸುಸಾನಳನ್ನು ಹೃತ್ತಿಕ್ ಪ್ರೀತಿಸಿ ಮದುವೆ ಆಗಿದ್ದರು. ಇವರ ವಿವಾಹ ಬೆಂಗಳೂರಿನಲ್ಲಿ ಹೊರವಲಯದಲ್ಲಿರುವ ಗೋಲ್ಡನ್ ಫಾರ್ಮ ರೆಸಾರ್ಟ್‌ನಲ್ಲಿ ನೆರವೇರಿತ್ತು.