ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸರ್ಕಾರ ರಚನೆ: ಕಾಲವಕಾಶ ಕೇಳಿದ ಕೇಜ್ರಿವಾಲ್

ಸಂಖ್ಯಾಬಲದ ಕೊರತೆ ಎದುರಿಸುತ್ತಿರು ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ರಚನೆ ಕುರಿತು ತಮ್ಮ ನಿರ್ಧಾರ ತಿಳಿಸಲು...

Mainashree
Updated On : 14 Dec 2013, 12:00 pm

ನವದೆಹಲಿ: ಸಂಖ್ಯಾಬಲದ ಕೊರತೆ ಎದುರಿಸುತ್ತಿರು ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ರಚನೆ ಕುರಿತು ತಮ್ಮ ನಿರ್ಧಾರ ತಿಳಿಸಲು ಒಂದು ವಾರಗಳ ಕಾಲವಕಾಶ ಕೇಳಿದೆ.

ಶನಿವಾರ ದೆಹಲಿಯ ಉಪರಾಜ್ಯಪಾಲ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಸರ್ಕಾರ ರಚನೆ ಕುರಿತು ತಮ್ಮ ಪಕ್ಷದ ನಿರ್ಧಾರವನ್ನು ತಿಳಿಸಲು ಒಂದು ವಾರಗಳ ಕಾಲವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ದೆಹಲಿಯಲ್ಲಿ ಎಎಪಿ ಸರ್ಕಾರ ರಚಿಸಲು ಮುಂದಾದರೇ ಬೆಂಬಲು ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. ಕಾಂಗ್ರೆಸ್ ಪಕ್ಷದ ಬೆಂಬಲವನ್ನು ತಿರಸ್ಕರಿಸಿದ ಎಎಪಿ, ಸರ್ಕಾರ ರಚನೆ ಕುರಿತು ನಿರ್ಧಾರ ತಿಳಿಸಲು ಕಾಲವಕಾಶ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸರ್ಕಾರ ರಚಿಸುವಂತೆ ಉಪರಾಜ್ಯಪಾಲರು ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ 2ನೇ ಅತಿ ದೊಡ್ಡ ಪಕ್ಷವಾದ ಎಎಪಿಗೆ ಸರ್ಕಾರ ರಚನೆ ಆಹ್ವಾನ ಸಿಕ್ಕಿತ್ತು. ಎಎಪಿ ಕೂಡ ಸಂಖ್ಯಾಬಲದ ಕೊರತೆ ಇದೆ ಎಂದು ಹೇಳಿತ್ತು. ಆದರೆ, ಈಗ ಕಾಂಗ್ರೆಸ್‌ನ ಬೆಂಬಲ ಹಾಗೂ ಬಿಜೆಪಿಯ ಸಹಕಾರದ ಭರವಸೆ ಆಮ್ ಆದ್ಮಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement