ಮಂಡೇಲಾ ಅಂತ್ಯಕ್ರಿಯೆ
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಅಂತ್ಯಕ್ರಿಯೆ ಭಾನುವಾರ ಅವರ ಹುಟ್ಟೂರಾದ ಖುನುವಿನಲ್ಲಿ ನಡೆಯಿತು...
ಖುನು: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಅಂತ್ಯಕ್ರಿಯೆ ಭಾನುವಾರ ಅವರ ಹುಟ್ಟೂರಾದ ಖುನುವಿನಲ್ಲಿ ನಡೆಯಿತು.
ಸಮಾನತೆಗಾಗಿ ದುಡಿದು 27 ವರ್ಷ ಜೈಲು ವಾಸ ಅನುಭವಿಸಿದ, ನೋಬೆಲ್ ಪ್ರಶಸ್ತಿ ವಿಜೇತ ಮಂಡೇಲಾ ಅವರಿಗೆ ಸೇನಾಪಡೆಯಿಂದ ವಿಶೇಷ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ಬ್ರಿಟನ್ನ ರಾಜ ಚಾರ್ಲ್ಸ್, ಅಮೆರಿಕದ ನಾಗರಿಕ ಹಕ್ಕುಗಳ ಕಾರ್ಯಕರ್ತ ರೆವರೆಂಡ್ ಜೆಸ್ಸಿ ಜಾಕ್ಸೆನ್ ಸೇರಿದಂತೆ ಅಂತ್ಯ ಸಂಸ್ಕಾರ ಕ್ರಿಯೆಯಲ್ಲಿ ಸುಮಾರು 4,500 ಜನ ಅತಿಥಿಗಳು ಭಾಗವಹಿಸಿದ್ದರು.
ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಿ, ಆಕಾಶಕ್ಕೆ ಗುಂಡು ಹಾರಿಸಿ 21 ಗನ್ ಸೆಲ್ಯೂಟ್ಗಳನ್ನು ನೀಡಿದ ನಂತರ ಮಂಡೇಲಾ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರಗೊಳಿಸಲಾಯಿತು.
ಡಿಸೆಂಬರ್ 5ರಂದು ಜೊಹಾನ್ಸ್ ಬರ್ಗ್ನಲ್ಲಿ ವಿಧಿವಶರಾದ ಮಂಡೇಲಾ ಅವರಿಗೆ 95 ವಯಸ್ಸಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಕರಿಯ-ಬಿಳಿಯರ ಸಮಾನತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಮಂಡೇಲಾ ಅವರು ಇನ್ನು ನೆನಪು ಮಾತ್ರವಾಗಿದ್ದಾರೆ.