ರಾಮದೇವ್ ವಿರುದ್ಧ ಕಾಂಗ್ರೆಸ್ ಸಂಚು ರೂಪಿಸುತ್ತಿದೆ: ಮೋದಿ
ಉತ್ತರಾಖಂಡದ ರಾಜಧಾನಿಯಲ್ಲಿ ಭಾನುವಾರ ನಡೆದ 'ಶಂಖನಾದ ರ್ಯಾಲಿ'ಯನ್ನುದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ...
ಡೆಹ್ರಾಡೂನ್: ಉತ್ತರಾಖಂಡದ ರಾಜಧಾನಿಯಲ್ಲಿ ಭಾನುವಾರ ನಡೆದ 'ಶಂಖನಾದ ರ್ಯಾಲಿ'ಯನ್ನುದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಸದ್ಯ ಲೋಕಪಾಲ ಮಸೂದೆ ಚರ್ಚೆ ನಡೆಯುತ್ತಿರುವುದರ ಬಗ್ಗೆ ಮಾತನಾಡಿದ ಮೋದಿ, ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ಗೆ ಆಕಾಶದಷ್ಟು ದುರಹಂಕಾರವಿದೆ. ಕಾಂಗ್ರೆಸ್ನ ಕೆಲವೊಂದು ನಾಯಕರು ಲೋಕಪಾಲದ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಪಾಲ ಮಸೂದೆ ಜಾರಿಗೆ ತರಬೇಕೆಂದಿದ್ದರೆ ಅದನ್ನು ಉತ್ತರಾಖಂಡ್ನಲ್ಲೇ ಅನುಷ್ಠಾನ ಮಾಡಲು ಹಿಂಜರಿಯುವುದು ಯಾಕೆ? ಎಂದು ಮೋದಿ ಪ್ರಶ್ನಿಸಿದ್ದಾರೆ.
ಅದೇ ವೇಳೆ ಕಾಂಗ್ರೆಸ್ ಸರ್ಕಾರ ಯೋಗ ಗುರು ರಾಮ್ದೇವ್ ಬಾಬಾ ವಿರುದ್ಧ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಾಬಾ ರಾಮ್ದೇವ್ರ ವಿರುದ್ಧ ಸಂಚು ಹೂಡುತ್ತಿರುವ ಸಮಯದ ಅರ್ಧದಷ್ಟಾದರು ಸಮಯವನ್ನು ಕಾಂಗ್ರೆಸ್ಸಿಗರು ಉತ್ತಾರಾಖಂಡ್ ನೆರೆ ಸಂತ್ರಸ್ತರಿಗಾಗಿ ವ್ಯಯಿಸಿದ್ದರೆ ಅಲ್ಲಿಯ ಚಿತ್ರಣವೇ ಬದಲಾಗುತ್ತಿತ್ತು ಎಂದು ಮೋದಿ ಹೇಳಿದ್ದಾರೆ.