7ನೇ ದಿನಕ್ಕೆ ಕಾಲಿಟ್ಟ ಅಣ್ಣಾ ನಿರಶನ
ರಾಲೇಗಾಂವ್ ಸಿದ್ಧಿ: ಪ್ರಬಲ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಕೈಗೊಂಡಿರುವ ಅನಿರ್ಧಿಷ್ಟವಾಧಿ ಉಪವಾಸ ಸತ್ಯಾಗ್ರಹ ಸೋಮವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.
ಅಣ್ಣಾ ಹಜಾರೆ ಅವರು ತಮ್ಮ ಗ್ರಾಮವಾದ ರಾಲೇಗಾಂವ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಅಣ್ಣಾ ನಿರಶನ ಆರಂಭಿಸಿದ ದಿನದಿಂದ ಈವರೆಗೆ 4.3ಕೆ.ಜಿ ತೂಕ ಕಡಿಮೆಯಾಗಿದ್ದಾರೆ. ದಿನೇ ದಿನೇ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದರೂ, ಅಣ್ಮಾ ನಿರಶನ ಕೈಬಿಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.
ದೇಶದ ಬಡ ಜನತೆಯ ಏಳಿಗೆಗಾಗಿ ಈ ಮಸೂದೆ ಜಾರಿಯಾಗುವುದು ಬಹಳ ಪ್ರಮುಖವಾಗಿದೆ. ಈ ಮಸೂದೆ ಜಾರಿಯಾದರೇ ನಿರಶನ ಕೈಬಿಡುತ್ತೇನೆ ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.
ಸರ್ಕಾರ ಮಂಡಿಸುತ್ತಿರುವ ಲೋಕಪಾಲ್ ಮಸೂದೆಗೆ ಕೇಜ್ರಿವಾಲ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅಣ್ಣಾ ಹಜಾರೆ ಅವರು, ಕೂಡಲೇ ಮಸೂದೆ ಜಾರಿ ಮಾಡಬೇಕು ಎಂದಿದ್ದಾರೆ. ಇದಲ್ಲದೇ, ಸಮಾಜವಾದಿ ಪಕ್ಷದ ನಾಯಕರಿಗೆ ಮಸೂದೆ ಜಾರಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ್ ಮಸೂದೆ ಜಾರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಣ್ಣಾ ಹೇಳಿದ್ದಾರೆ.