ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮಾ ವಿಧಿವಶ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಿರುವಾಂಕೂರಿನ ರಾಜವಂಶಸ್ಥ ರಾಜ ಉತ್ತರಾಂಡಮ್ ತಿರುನಲ್..
ತಿರುವಾಂಕೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಿರುವಾಂಕೂರಿನ ರಾಜವಂಶಸ್ಥ ರಾಜ ಉತ್ತರಾಂಡಮ್ ತಿರುನಲ್ ಮರ್ತಾಂಡ ವರ್ಮಾ ಅವರು ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.
ದೇಶದ ಅತಿ ಶ್ರೀಮಂತ ದೇವಾಲಯ ಎಂದೇ ಖ್ಯಾತಿ ಪಡೆದಿರುವ ಅನಂತ ಪದ್ಮನಾಭ ದೇವಾಲಯವನ್ನು ನಿರ್ವಹಿಸುತ್ತಿದ್ದ 91 ವರ್ಷದ ರಾಜ ಮಾರ್ತಾಂಡ ವರ್ಮಾ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾಜ ರವಿ ವರ್ಮಾ ಕೊಚುಕೊಯ್ಲ್ ತಂಪೂರಣ್ ಹಾಗೂ ತಾಯಿ ಸೇತು ಪಾರ್ವತಿಬಾಯಿ ಅವರ ಎರಡನೇ ಪುತ್ರರಾಗಿರುವ ಮಾರ್ತಾಂಡ್ ವರ್ಮಾ ಅವರು ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಮಹಾರಾಜ ಮಾರ್ತಾಂಡ ವರ್ಮಾ ಅವರ ನಿಧನದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಒಂದು ದಿನ ಸರ್ಕಾರಿ ರಜೆ ಘೋಷಿಸಿದೆ. ಅಲ್ಲದೆ ಕಾರ್ಯನಿಮಿತ್ತ ದೆಹಲಿಯಲ್ಲಿರುವ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅವರು, ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದು, ಇಂದು ಮಧ್ಯಾಹ್ನ ಮಹಾರಾಜರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.