ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಯನ್ನು ಅಸಾರಾಂಗೆ ಹೋಲಿಸಿದ ಕೇಂದ್ರ ಸಚಿವ

Mainashree
Updated On : 16 Dec 2013, 6:45 am

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಲೋಕಯುಕ್ತದ ಬಗ್ಗೆ ಮಾತನಾಡುವುದು, ಧಾರ್ಮಿಕ ಗುರು ಅಸಾರಾಂ ಬಾಪು ಸಾಚ್ಯತನದ ಬಗ್ಗೆ ಮಾತನಾಡುವುದು ಒಂದೇ ಆಗಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಸೋಮವಾರ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಈ ರೀತಿ ಹೇಳಿಕೆ ನೀಡುವ ಮೂಲಕ ಜೈರಾಮ್ ರಮೇಶ್ ವಿವಾದಕ್ಕೀಡಾಗಿದ್ದಾರೆ.

ಮೋದಿ ಲೋಕಾಯುಕ್ತದ ಬಗ್ಗೆ ಮಾತನಾಡುವುದು ಒಂದೇ, ಅಸಾರಾಂ ಬಾಪು ತಾನು ಪರಿಶುದ್ಧ ಎನ್ನುವುದು ಒಂದೇ ಎಂದು ರಮೇಶ್ ವ್ಯಂಗ್ಯವಾಡಿದ್ದಾರೆ.

ಲೋಕಪಾಲ್ ಮಸೂದೆ ಜಾರಿಗೊಳಿಸಲು ಕಾಂಗ್ರೆಸ್ ನಿಧಾನ ಮಾಡುತ್ತಿದೆ ಎಂದು ಮೋದಿ ದೂರಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ರಮೇಶ್, 10 ವರ್ಷಗಳಿಂದ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡದ ಮೋದಿ, ಮಸೂದೆ ಜಾರಿ ವಿಳಂಬದ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ ಎಂದು ಕಿಡಿಕಾರಿದ್ದಾರೆ.

10 ವರ್ಷಗಳ ಕಾಲ ಲೋಕಾಯುಕ್ತರನ್ನು ನೇಮಕ ಮಾಡದ ಮೋದಿ, ಇಂದು ಉಪದೇಶ ನೀಡುತ್ತಿದ್ದಾರೆ. ಇದನ್ನು ಸರಿಯಾಗಿ ಗಮನಿಸಿದರೆ, ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಅಸಾರಾಂ ಬಾಪು ಅವರು ತಮ್ಮ ಪರಿಶುದ್ಧತೆಗೆ ಮಾತಾನಾಡಿದಂತಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ಧಾರ್ಮಿಕ ಗುರು ಅಸಾರಾಂ ಬಾಪು ಅವರು ಬಂಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement