ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲೋಕಪಾಲ ಬಿಲ್ ಜಾರಿಗಾಗಿ ಅಧಿವೇಶನ ವಿಸ್ತರಿಸಲು ಸಿದ್ಧ: ಕಮಲ್‌ನಾಥ್

Mainashree
Updated On : 16 Dec 2013, 4:37 am

ನವದೆಹಲಿ: "ಬೇಕಾದರೆ ಲೋಕಪಾಲ ಮಸೂದೆ ಜಾರಿಗಾಗಿ ಚಳಿಗಾಲದ ಅಧಿವೇಶನವನ್ನು ವಿಸ್ತರಿಸಲು ಸಿದ್ಧ" ಎಂದು ಕೇಂದ್ರ ಸಚಿವ ಕಮಲ್ ನಾಥ್ ಸೋಮವಾರ ಹೇಳಿದ್ದಾರೆ.

ಲೋಕಪಾಲ ಮಸೂದೆ ಮಂಡನೆ ಸಂದಂರ್ಭದಲ್ಲಿ ರಾಜ್ಯಸಭೆಯಲ್ಲಿ ಗದ್ದಲ ಉಂಟಾದ್ದರಿಂದ ಕಲಾಪವನ್ನು ಮುಂದೂಡಲಾಯಿತು. ಈ ಬಾರಿ ಅಧಿವೇಶದಲ್ಲಿಯೂ ಲೋಕಪಾಲ್ ಮಸೂದೆ ಮಂಡನೆಯಾಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು.

ಇದಕ್ಕೆ ಪ್ರತಿಕ್ರಿಯಿಸಿರುವ ಕಮಲ್‌ನಾಥ್, ನಮಗೆ ಎಲ್ಲಾ ಪಕ್ಷಗಳಿಂದ ಮಸೂದೆ ಜಾರಿಗೆ ಬೆಂಬಲ ದೊರತರೆ, ಬೇಕಾದರೆ ಚಳಿಗಾಲದ ಅಧಿವೇಶನವನ್ನು ವಿಸ್ತರಿಸಲು ಸಿದ್ದ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಸದಸ್ಯರು ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಮಲ್‌ನಾಥ್ ಅವರು, ಲೋಕಪಾಲ್ ಮಸೂದೆ ಜಾರಿಗೆ ಸಮಾಜವಾದಿ ಪಕ್ಷ ಬೆಂಬಲಿಸಬೇಕು ಎಂದು ರಾಜ್ಯಸಭೆಯಲ್ಲಿ ಮನವಿ ಮಾಡಿದರು.

ಮೊದಲಿಗೆ ಮೇಲ್ಮಮನೆಯಲ್ಲಿ ಮಸೂದೆ ಜಾರಿಯಾಗಬೇಕು, ನಂತರ ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಕಮಲ್‌ನಾಥ್ ವರದಿಗಾರರಿಗೆ ತಿಳಿಸಿದ್ದಾರೆ.

ನಾನು ಸಮಾಜವಾದಿ ಪಕ್ಷದ ಸದಸ್ಯರಲ್ಲಿ ವಿನಂತಿಸಿಕೊಳ್ಳುತ್ತೇನೆ, ದಯವಿಟ್ಟು ಮಸೂದೆ ಜಾರಿಗೆ ಬೆಂಬಲಿಸಿ. ದೇಶದ ಎಲ್ಲಾ ಜನತೆ ಮಸೂದೆ ಜಾರಿಗೆ ಆಗ್ರಹಿಸುತ್ತಿದ್ದಾರೆ. ಇದನ್ನು ಸಮಾಜವಾದಿ ಪಕ್ಷ ಕಡೆಗಣಿಸಬಾರದು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement