ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್ ನಾಯಕರು ಸಲಿಂಗಿಗಳು: ರಾಮ್‌ದೇವ್

ಸಲಿಂಗರತಿ ಅಪರಾಧ ಎಂದು ಹೇಳುವ ಮೂಲಕ ಸೆಕ್ಷನ್ 377ಕ್ಕೆ ಮರುಜೀವ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸಿರುವುದರ...

Rashmi Kasaragodu
Updated On : 17 Dec 2013, 6:14 am

ನವದೆಹಲಿ: ಸಲಿಂಗರತಿ ಅಪರಾಧ ಎಂದು ಹೇಳುವ ಮೂಲಕ ಸೆಕ್ಷನ್ 377ಕ್ಕೆ ಮರುಜೀವ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸಿರುವುದರ ಬಗ್ಗೆ ಬಾಬಾ ರಾಮ್‌ದೇವ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ನ ಸದಸ್ಯರು ಸಲಿಂಗಿಗಳು ಆದ್ದರಿಂದಲೇ ಅವರು ಸಲಿಂಗರತಿಗೆ ಸಮ್ಮತಿ ಸೂಚಿಸುತ್ತಿದ್ದಾರೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷ ಚುನಾವಣಾ ಚಿಹ್ನೆಯಾಗಿ ಪೊರಕೆ ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ರಾಮ್‌ದೇವ್‌ರಲ್ಲಿ ಕೇಳಿದಾಗ ಸಂಸತ್‌ಗೆ  ಇಬ್ಬರು ಅಥವಾ ಮೂವರು ಕಸಗುಡಿಸುವವರು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ.

ಸಲಿಂಗರತಿ ಅಪರಾಧ ಎಂದು ಸೆಕ್ಷನ್ 277ಕ್ಕೆ ಮರುಜೀವ ನೀಡಿರುವ ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅಸಮಧಾನ ವ್ಯಕ್ತ ಪಡಿಸಿದ್ದರು.

ಅದೇ ವೇಳೆ ಸೆಕ್ಷನ್ 377ಕ್ಕೆ ಬಿಜೆಪಿ ಬೆಂಬಲ ಸೂಚಿಸಿದ್ದು, ಸಲಿಂಗರತಿ ಪ್ರಕೃತಿ ವಿರುದ್ಧ ಮತ್ತು ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು ಎಂದು ಹೇಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement