ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೇವಯಾನಿ ಪ್ರಕರಣ: ಐಡಿ ವಾಪಸ್ ನೀಡಲು ಒತ್ತಾಯ

ನ್ಯೂಯಾರ್ಕ್‌ನಲ್ಲಿರುವ ಭಾರತ ರಾಯಭಾರ ಕಚೇರಿಯ ಉಪ ಕೌನ್ಸೆಲರ್ ದೇವಯಾನಿ..

Rashmi Kasaragodu
Updated On : 17 Dec 2013, 4:54 am

ನವದೆಹಲಿ: ನ್ಯೂಯಾರ್ಕ್‌ನಲ್ಲಿರುವ ಭಾರತ ರಾಯಭಾರ ಕಚೇರಿಯ ಉಪ ಕೌನ್ಸೆಲರ್ ದೇವಯಾನಿ ಖೋಬ್ರಾಗಡೆ ಅವರನ್ನು ನಡೆಸಿಕೊಂಡ ರೀತಿಗೆ ಭಾರತ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.

ಅದೇ ವೇಳೆ ಅಮೆರಿಕದ ರಾಯಭಾರಿ ಅಧಿಕಾರಿಗಳಿಗೆ ನೀಡಿರುವ ಗುರುತು ಪತ್ರಗಳನ್ನು ಹಿಂದಿರುಗಿಸುವಂತೆ ಭಾರತ ಅಮೆರಿಕಕ್ಕೆ ಒತ್ತಾಯಿಸಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ನ್ಯೂಯಾರ್ಕ್‌ನಲ್ಲಿ ದೇವಯಾನಿ ಅವರನ್ನು ಶಿಷ್ಟಾಚಾರ ಉಲ್ಲಂಘಿಸಿ ನಡುಬೀದಿಯಲ್ಲಿ ಬಂಧಿಸಿದ್ದಷ್ಟೇ ಅಲ್ಲ ಅವರನ್ನು ವಿವಸ್ತ್ರಗೊಳಿಸಿ ತಪಾಸಣೆಯನ್ನೂ ನಡೆಸಲಾಗಿತ್ತು. ತಪಾಸಣೆಯ ಬಳಿಕ ದೇವಯಾನಿ ಅವರನ್ನು ಮಾದಕ ವ್ಯಸನಿಗಳ ಸೆಲ್‌ನಲ್ಲಿ ಕೂಡಿ ಹಾಕಲಾಗಿತ್ತು.

ಇದು ರಾಯಭಾರ ಕಚೇರಿ ಅಧಿಕಾರಿಗಳ ಜತೆಗಿನ ನಡವಳಿಗೆ ಸಂಬಂಧ ರಚಿಸಲಾಗಿರುವ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಭಾರತ ಇದೀಗ ಅಮೆರಿಕದ ರಾಜತಾಂತ್ರಿಕರಿಗೆ ನೀಡಿರುವ ಏರ್‌ಪೋರ್ಟ್ ಪಾಸ್‌ನ್ನು ಕೂಡಾ ವಾಪಾಸ್ ಪಡೆದುಕೊಂಡಿದೆ.

ಅಮೆರಿಕದ ರಾಜತಾಂತ್ರಿಕರು ಅನುಭವಿಸುತ್ತಿರುವ ವಿನಾಯಿತಿ ಮತ್ತು ಪ್ರಯೋಜನಗಳ ಪುನರ್ ಪರಿಶೀಲನೆ ನಡೆಸುವ ಸಲುವಾಗಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕ ದೇವಯಾನಿ ಜತೆ ನಡೆದುಕೊಂಡಿರುವ ರೀತಿಯನ್ನು ತೀವ್ರವಾಗಿ ಖಂಡಿಸಿದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಇಂಥಾ ನಡವಳಿಕೆಗಳನ್ನು ಕ್ಷಮಿಸಲಾಗುತ್ತಿಲ್ಲ. ಈ ಘಟನೆಯ ಬಗ್ಗೆ ನಾನು ತೀವ್ರ ನೊಂದಿದ್ದೇನೆ. ಪ್ರಸ್ತುತ ವಿಷಯವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಅಮೆರಿಕ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement