ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜ್ಯಸಭೆಯಲ್ಲಿ ಲೋಕಪಾಲ ವಿಧೇಯಕಕ್ಕೆ ಅಂಗೀಕಾರ

ಭ್ರಷ್ಟಾಚಾರದ ವಿರುದ್ಧ ಪ್ರಬಲ ಅಸ್ತ್ರವಾಗಬಲ್ಲದು ಎಂದು ನಂಬಲಾಗಿರುವ ಲೋಕಪಾಲ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗಿಕಾರ ಲಭಿಸಿದೆ. ಈ ಮೂಲಕ ಐದು...

Rashmi Kasaragodu
Updated On : 17 Dec 2013, 6:43 am

ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಪ್ರಬಲ ಅಸ್ತ್ರವಾಗಬಲ್ಲದು ಎಂದು ನಂಬಲಾಗಿರುವ ಲೋಕಪಾಲ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗಿಕಾರ ಲಭಿಸಿದೆ. ಈ ಮೂಲಕ ಐದು ದಶಕಗಳ ಬೇಡಿಕೆಯಾಗಿರುವ ಲೋಕಪಾಲ ಮಸೂದೆಗೆ ಹಿಡಿದಿರುವ ಗ್ರಹಣಕ್ಕೆ ಮಂಗಳವಾರ ಮೋಕ್ಷ ಲಭಿಸಿದೆ.

ರಾಜ್ಯಸಭೆಯಲ್ಲಿ ಸೋಮವಾರವೇ ಲೋಕಪಾಲ ಮಸೂದೆಯ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಆದರೆ ಕೇಂದ್ರ ಸಚಿವ ಸೀಸ್‌ರಾಂ ಓಲಾ ಅವರ ನಿಧನದಿಂದಾಗಿ ಉಭಯ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿತ್ತು.

ಮಂಗಳವಾರ ಪ್ರಸ್ತುತ ವಿಧೇಯಕದ ಬಗ್ಗೆ ಚರ್ಚೆ ಆರಂಭವಾಗಿದ್ದು, ಸಂಜೆ 5.25ಕ್ಕೆ ಮತದಾನ ಆರಂಭವಾಗಿದೆ. ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ವಿಧೇಯಕ ಮಂಡಿಸಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತದಾನದಲ್ಲಿ ಪಾಲ್ಗೊಂಡು ವಿಧೇಯಕ ಅಂಗೀಕಾರಕ್ಕೆ ಸಮ್ಮತಿ ಸೂಚಿಸಿವೆ.

ನಾಳೆ ಲೋಕಸಭೆಯಲ್ಲಿ ಮಂಡನೆ

ರಾಜ್ಯಸಭೆಯಲ್ಲಿ ಲೋಕಪಾಲ ವಿಧೇಯಕ ಅಂಗೀಕಾರಗೊಂಡಿದ್ದು, ಬುಧವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಅಣ್ಣಾ ಸಂತಸ

ರಾಜ್ಯಸಭೆಯಲ್ಲಿ ಲೋಕಪಾಲ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸಂತಸ ವ್ಯಕ್ತ ಪಡಿಸಿದ್ದಾರೆ. ಆದರೆ, ಬುಧವಾರ ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಲಭಿಸಿದರೆ ಮಾತ್ರ ತಾನು ನಿರಶನ ಕೈ ಬಿಡುವುದಾಗಿ ಹೇಳಿದ್ದಾರೆ. ಅದೇ ವೇಳೆ ಲೋಕಪಾಲ ವಿಧೇಯಕ ಅಂಗೀಕಾರಕ್ಕಾಗಿ ಮತದಾನ ಮಾಡಿದ ಎಲ್ಲ ರಾಜಕೀಯ ಪಕ್ಷಗಳಿಗೆ ಅಣ್ಣಾ ಧನ್ಯವಾದ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement