ಹತ್ತು ಮಕ್ಕಳ ಹೆತ್ತಳಾ ಮಹಾತಾಯಿ
ಮಧ್ಯಪ್ರದೇಶದಲ್ಲಿ 28ರ ಹರೆಯದ ಯುವತಿಯೊಬ್ಬಳು ಸೋಮವಾರ 10 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇಲ್ಲಿನ ಸಂತಾ ಜಿಲ್ಲೆಯ ಕೋಟಿ...
ಭೋಪಾಲ್: ಮಧ್ಯಪ್ರದೇಶದಲ್ಲಿ 28ರ ಹರೆಯದ ಯುವತಿಯೊಬ್ಬಳು ಸೋಮವಾರ 10 ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಇಲ್ಲಿನ ಸಂತಾ ಜಿಲ್ಲೆಯ ಕೋಟಿ ಗ್ರಾಮದ ಅಂಜು ಕುಶ್ವಾಹ ಎಂಬಾಕೆ 10 ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ. ಈಕೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತನ್ನ ಮನೆಯಿಂದ 125 ಕಿ.ಮೀ ದೂರವಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆಯೇ ಈಕೆ 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಆಸ್ಪತ್ರೆಗೆ ತಲುಪಿದಾಗ ಅಂಜು ಅವರ ಪತಿ 9 ಶಿಶುಗಳನ್ನು ಡಾಕ್ಟರ್ ಕೈಗಿತ್ತಾಗ ವೈದ್ಯರಿಗೇ ಅಚ್ಚರಿಯಾಗಿದೆ. ನಂತರ ಅಂಜು ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗರ್ಭದಲ್ಲಿ ಇನ್ನೊಂದು ಶಿಶು ಇರುವುದು ಪತ್ತೆಯಾಗಿದೆ.
ಸೋಮವಾರ ಬೆಳಗ್ಗೆ ಅಂಜು 10ನೇ ಶಿಶುವಿಗೆ ಜನ್ಮ ನೀಡಿದ್ದು ಎಲ್ಲ ಶಿಶುಗಳು ಸಾವನ್ನಪ್ಪಿವೆ ಎಂದು ಆಸ್ಪತ್ರೆಯ ಅಸಿಸ್ಟೆಂಟ್ ಸುಪರಿಟೆಂಡೆಟ್ ಎಸ್.ಕೆ ಪಾಠಕ್ ಹೇಳಿದ್ದಾರೆ.
ಹೈಪರ್ ಸ್ಟಿಮುಲೇಷನ್ ಸಿಂಡ್ರೋಮ್ನಿಂದಾಗಿ 10 ಭ್ರೂಣಗಳು ಬೆಳೆಯಲು ಕಾರಣವಾಯಿತು ಎಂದು ಹೇಳಿದ ವೈದ್ಯರು ಅಂಜು ಆರೋಗ್ಯದಿಂದಿದ್ದಾರೆ ಎಂದು ತಿಳಿಸಿದ್ದಾರೆ.