2014 ಚುನಾವಣೆಗೆ ಸಿದ್ಧವಾಗಲು ಸೋನಿಯಾ ಕರೆ
ಒಗ್ಗಟ್ಟು ಮತ್ತು ಶಿಸ್ತಿನ ಕೊರತೆಯಿಂದಾಗಿಯೇ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯುಂಟಾಗಿದೆ. ಆದರೆ ...
ನವದೆಹಲಿ: ಒಗ್ಗಟ್ಟು ಮತ್ತು ಶಿಸ್ತಿನ ಕೊರತೆಯಿಂದಾಗಿಯೇ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯುಂಟಾಗಿದೆ. ಆದರೆ ಈ ಹಿನ್ನಡೆಯಿಂದ ಅಧೀರರಾಗುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಅದೇ ವೇಳೆ 2014ರ ಸಾರ್ವತ್ರಿಕ ಚುನಾವಣೆಗೆ ಎಲ್ಲರೂ ಸಜ್ಜಾಗುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೋನಿಯಾ ಕರೆ ನೀಡಿದ್ದಾರೆ.
ಚುನಾವಣೆಯಲ್ಲಿ ಪರಾಭವಗೊಳ್ಳಲು ಹಲವಾರು ಕಾರಣಗಳಿವೆ ಎಂದು ಹೇಳಿದ ಸೋನಿಯಾ, ಎಲ್ಲಾ ಜನರಿಗೂ ನಮ್ಮ ಸಾಧನೆ, ಯೋಜನೆ ಮತ್ತು ಧೋರಣೆಗಳನ್ನು ಅರ್ಥ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲವಲ್ಲಾ ಎಂದು ನುಡಿದಿದ್ದಾರೆ.